ಖಾಸಗಿ ಶಾಲಾ ಶಿಕ್ಷಕರಿಗೆ ಉಚಿತ ಮಾಸಿಕ 2 ಸಾವಿರ ಮತ್ತು 25ಕೆಜಿ ಅಕ್ಕಿ : ತೆಲಂಗಾಣ ಸರ್ಕಾರ ಘೋಷಣೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಹೈದರಾಬಾದ್: ಮಾನ್ಯತೆ ಪಡೆದ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಮತ್ತು ಇತರ ಸಿಬ್ಬಂದಿಗೆ ಏಪ್ರಿಲ್ ನಿಂದ ಜಾರಿಗೆ ಬರುವಂತೆ ತಿಂಗಳಿಗೆ ರೂ .2000 ಆರ್ಥಿಕ ನೆರವು ಮತ್ತು 25 ಕೆಜಿ ಅಕ್ಕಿ ನೀಡಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ.

ಕರೋನಾ ಯುಗದಲ್ಲಿ ಉದ್ಯೋಗ ಕಳೆದುಕೊಂಡವರಲ್ಲಿ ಖಾಸಗಿ ಶಾಲೆಗಳ ಶಿಕ್ಷಕರು ಮತ್ತು ಸಿಬ್ಬಂದಿ ಕೂಡ ಹೌದು. ಕೆಲಸ ಕಳೆದುಕೊಂಡು ಮನೆಯಲ್ಲಿರುವ ಶಿಕ್ಷಕರಿಗೆ ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ. ಇಂಥ ಸಂಕಷ್ಟದಲ್ಲಿರುವ ಶಿಕ್ಷಕರಿಗೆ ಆರ್ಥಿಕ ಸಹಾಯ ಒದಗಿಸಲು ಮುಂದಾಗಿರುವ ಕೆಸಿಆರ್ ಸರ್ಕಾರ ಅಂತಹ ಶಿಕ್ಷಕರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಧನ ಸಹಾಯದ ಜೊತೆಗೆ 25 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ.

ಈ ಕುರಿತು ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಕೆ‌.ಚಂದ್ರಶೇಖರ್ ರಾವ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದೆ. ನಮ್ಮ ಸರ್ಕಾರದ ಈ ಹೆಜ್ಜೆಯಿಂದ ರಾಜ್ಯದ ಒಂದೂವರೆ ಲಕ್ಷ ಶಿಕ್ಷಕರು ಮತ್ತು ಇತರ ನೌಕರರಿಗೆ ಪರಿಹಾರ ಸಿಗಲಿದೆ ಎಂದರು ಕೆಸಿಆರ್ ತಿಳಿಸಿದ್ದಾರೆ.

ತೆಲಂಗಾಣದ ಮಾನ್ಯತೆ ಪಡೆದ ಖಾಸಗಿ ಶಾಲೆಗಳ ಖಾಸಗಿ ಶಾಲೆಗಳ ಶಿಕ್ಷಕರು ಮತ್ತು ಇತರ ಸಿಬ್ಬಂದಿಗೆ ತಮ್ಮ ಸರ್ಕಾರ ಸಹಾಯ ಮಾಡುವುದಾಗಿ ಕೆಸಿಆರ್ ಸರ್ಕಾರ ಘೋಷಿಸಿದೆ. ಅಂತಹ ಎಲ್ಲ ಜನರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಧನ ಸಹಾಯದ ಜೊತೆಗೆ 25 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು. ಈ ಸಹಾಯ ಪಡೆಯಲು ಶಿಕ್ಷಕರು ಮತ್ತು ಇತರ ಸಿಬ್ಬಂದಿ ತಮ್ಮ ಜಿಲ್ಲೆಯ ಡಿಎಂ ಅವರನ್ನು ಸಂಪರ್ಕಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಅವರು ತಮ್ಮ ಬ್ಯಾಂಕ್ ಖಾತೆ ಮತ್ತು ಇತರ ಅಗತ್ಯ ಮಾಹಿತಿಯನ್ನು ಡಿಎಂ ಕಚೇರಿಗೆ ಸಲ್ಲಿಸಬೇಕಾಗುತ್ತದೆ ಎಂದು ಹೇಳಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು