ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನೇತರ ರೋಗಿಗಳನ್ನು ದಾಖಲಿಸಿಕೊಳ್ಳಲು ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯ ಮಾಡುವಂತಿಲ್ಲ : ರಾಜ್ಯ ಸರಕಾರ ಸುತ್ತೋಲೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನೇತರ ರೋಗಿಗಳನ್ನು ದಾಖಲಿಸಿಕೊಳ್ಳಲು ಕೋವಿಡ್ ನೆಗೆಟಿವ್ ಪ್ರಮಾಣ ಪತ್ರವನ್ನು ಕಡ್ಡಾಯ ಮಾಡುವಂತಿಲ್ಲ. ಹೀಗೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸುತ್ತೋಲೆ ಹೊರಡಿಸಿದೆ.

ಕೆಲವು ಖಾಸಗಿ ಆಸ್ಪತ್ರೆಗಳು ಕೋರೋನಾ ಹೊರತಾದ ರೋಗಿಗಳನ್ನು ದಾಖಲಿಸಿಕೊಳ್ಳಲು ಕೋವಿಡ್ ನೆಗೆಟಿವ್ ಪ್ರಮಾಣ ಪತ್ರವನ್ನು ಕಡ್ಡಾಯ ಮಾಡುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆಯೆಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಆಸ್ಪತ್ರೆಗಳ ಇಂತಹ ನಿರ್ಲಕ್ಷ್ಯ ಮನೋಭಾವದಿಂದಾಗಿ ರೋಗಿಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ ಮತ್ತು ಕೋವಿಡ್ ತಪಾಸಣೆ ಮಾಡಲು ಬರುವವರು ಉದ್ದದ ಸರತಿ ಸಾಲಿನಲ್ಲಿ ಧೀರ್ಘ ಸಮಯದವರೆಗೆ ಕಾಯಬೇಕಾಗಿ ಬರುವುದುಕೊರೋನೇತರ ರೋಗಿಗಳಲ್ಲಿ ಕೋರೋನಾದ ಲಕ್ಷಣಗಳು ಇಲ್ಲದಿದ್ದರೆ, ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ಸಲ್ಲಿಸುವಂತೆ ಅವರಿಗೆ ಕಡ್ಡಾಯ ಮಾಡಬಾರದು ಎಂದಿದೆ.

ಕೋವಿಡ್ ಪರೀಕ್ಷೆ ನಡೆಸುವ ಎಲ್ಲಾ ಪ್ರಯೋಗಾಲಯಗಳಲ್ಲೂ ಹಿರಿಯ ನಾಗರಿಕರಿಗೆ ಮತ್ತು ಗರ್ಭಿಣಿಯರಿಗಾಗಿ ಪ್ರತ್ಯೇಕ ಸರತಿ ಸಾಲನ್ನು ಮಾಡಬೇಕು. ಕೋವಿಡ್ ಪರೀಕ್ಷೆಯ ವರದಿಗಾಗಿ ಸರತಿಯಲ್ಲಿ ಕಾಯುವ ವೇಳೆ ದೈಹಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಮಾಡಬೇಕು. ಜನರು ನಿಲ್ಲುವ ಯಾ ಕುಳಿತುಕೊಳ್ಳುವ ಜಾಗವನ್ನು ಸೂಚಿಸಲು ಅಂತರ ಬಿಟ್ಟಿರುವಂತೆ ನೆಲದಲ್ಲಿ/ಆಸನದಲ್ಲಿ ಗುರುತು  ಮಾಡಿರಬೇಕು. ಮಾಸ್ಕ್ ಧರಿಸಿರುವುದನ್ನು ಖಚಿತಪಡಿಸಿರಬೇಕು. ಅದೇ ರೀತಿ ಕೈ ತೊಳೆಯುವ ಮತ್ತು ಸ್ಯಾನಿಟೈಝರ್ ಸೌಲಭ್ಯಗಳನ್ನೂ ಒದಗಿಸಬೇಕು ಎಂದು ಸುತ್ತೋಲೆಯಲ್ಲಿ ನಿರ್ದೇಶನ ನೀಡಲಾಗಿದೆ.

ಮೇಲಿನ ಆದೇಶಗಳನ್ನು ಪಾಲಿಸದ ಆಸ್ಪತ್ರೆಗಳ ಮತ್ತು ಪ್ರಯೋಗಾಲಯಗಳ ವಿರುದ್ಧ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಗಳ ಕಾಯ್ದೆ – 2020 ರ ಅನ್ವಯ ಕಠಿಣ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು