ಪಲರಿವಟ್ಟಮ್ ಫ್ಲೈಓವರ್ ಕೇಸ್ | ಮುಸ್ಲಿಂ ಲೀಗ್ ಶಾಸಕ ವಿ.ಕೆ. ಇಬ್ರಾಹಿಂ ಕುಂಞ ಆಸ್ಪತ್ರೆಯಿಂದಲೇ ಬಂಧನ

brahim Kunju Arrested
Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೇರಳ (18-11-2020):  ಪಲರಿವಟ್ಟಮ್ ಫ್ಲೈಓವರ್ ನಿರ್ಮಾಣ ಭ್ರಷ್ಟಾಚಾರ ಪ್ರಕರಣದಲ್ಲಿ ಕೇರಳ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹದಳ ಬುಧವಾರ ಮಾಜಿ ಕೇರಳ ಪಿಡಬ್ಲ್ಯುಡಿ ಸಚಿವ ಮತ್ತು ಮುಸ್ಲಿಂ ಲೀಗ್ ಶಾಸಕ ವಿ.ಕೆ. ಇಬ್ರಾಹಿಂ ಕುಂಞ ಅವರನ್ನು ಬಂಧಿಸಿದೆ.

ಶಾಸಕರು ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದು, ಮಂಗಳವಾರ ರಾತ್ರಿ ಎರ್ನಾಕುಲಂನ ಖಾಸಗಿ ಆಸ್ಪತ್ರೆಗೆ ಮತ್ತೆ ದಾಖಲಿಸಲಾಗಿತ್ತು. ಪ್ರಸ್ತುತ ಅವರು ಇಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಆದರೆ ಅಧಿಕಾರಿಗಳು ಆಸ್ಪತ್ರೆಗೆ ತೆರಳಿ ಇಬ್ರಾಹೀಂ ಅವರ ಬಂಧನವನ್ನು ದಾಖಲಿಸಿದ್ದಾರೆ.

ಈ ಕ್ರಮವು ರಾಜಕೀಯ ಪ್ರೇರಿತವಾಗಿದೆ ಎಂದು ಪ್ರತಿಪಕ್ಷಗಳು ಹೇಳಿಕೊಂಡಿವೆ. ಚಿನ್ನದ ಹಗರಣ ಪ್ರಕರಣ ಮತ್ತು ಅದರ ವಿರುದ್ಧದ ವಿವಿಧ ಭ್ರಷ್ಟಾಚಾರದ ಆರೋಪಗಳಿಂದ ಗಮನವನ್ನು ತಪ್ಪಿಸಲು ರಾಜ್ಯ ಸರ್ಕಾರದ ಪ್ರಯತ್ನ ಎಂದು ಪ್ರತಿಪಕ್ಷಗಳು ಹೇಳಿಕೊಂಡಿವೆ

ಹಿಂದಿನ ಯುಡಿಎಫ್ ಸರ್ಕಾರದ ಅಧಿಕಾರಾವಧಿಯಲ್ಲಿ 2014 ರಲ್ಲಿ ಪಲರಿವಟ್ಟಮ್ ಫ್ಲೈಓವರ್ ಸೇತುವೆಯ ನಿರ್ಮಾಣ ಪ್ರಾರಂಭವಾಯಿತು. 2016 ರ ಜೂನ್‌ನಲ್ಲಿ ಎಡ ಸರ್ಕಾರ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಈ ಯೋಜನೆ ಪೂರ್ಣಗೊಂಡಿತು ಮತ್ತು ಪ್ರಯಾಣಿಕರಿಗಾಗಿ ತೆರೆಯಲ್ಪಟ್ಟಿತು. ಉದ್ಘಾಟನೆಯ ಕೆಲವೇ ತಿಂಗಳುಗಳ ನಂತರ ಸೇತುವೆಯ  ಕೀಲುಗಳಲ್ಲಿ ಸಮಸ್ಯೆಗಳು ಕಂಡು ಬಂದಿತ್ತು . 2019 ರಲ್ಲಿ ಸೇತುವೆಯನ್ನು ಮುಚ್ಚಲಾಗಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು