ತಿರುವನಂತಪುರ : ಮುಂದಿನ ದಿನಗಳಲ್ಲಿ ಚುನಾವಣೆಯನ್ನು ಎದುರಿಸಲಿಕ್ಕಿರುವ ಪಂಚರಾಜ್ಯಗಳಲ್ಲಿ ಕೇರಳವೂ ಒಂದು.ವಿವಿಧ ಪಕ್ಷಗಳು ತಮ್ಮದೇ ಪ್ರಚಾರದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ.ಅದೇ ರೀತಿ ಕಾಂಗ್ರೆಸ್ ಪಕ್ಷವೂ ಚುನಾವಣಾ ಪೂರ್ವಭಾವಿ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ.
ಇದರ ಭಾಗವಾಗಿ ರಾಹುಲ್ ಗಾಂಧಿ ಪ್ರತಿನಿಧಿಸುತ್ತಿರುವ ಕೇರಳದ ವಯನಾಡ್ ಜಿಲ್ಲೆಗೆ ಕಾಂಗ್ರೆಸ್ ಪಕ್ಷದ ವೀಕ್ಷಕರನ್ನಾಗಿ ಮಂಗಳೂರು ಶಾಸಕರಾದ ಯುಟಿ ಖಾದರ್ ರವರನ್ನು ಎಐಸಿಸಿ ನೇಮಕ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ಯುಟಿ ಖಾದರ್ “ಅಧಿವೇಶನದ ಕಲಾಪಗಳು ನಡೆಯುತ್ತಿದ್ದು,ಮುಗಿದ ನಂತರ ಶೀಘ್ರವಾಗಿ ವಯನಾಡಿಗೆ ತೆರಳಲಿದ್ದೇನೆ” ಎಂದರು.