ಕೇರಳ ಪೋಲೀಸರ ಕೋವಿಡ್ ಜಾಗೃತಿಯ ಹೊಚ್ಚ ಹೊಸ ವೀಡಿಯೋ | ದೇಶಾದ್ಯಂತ ವೈರಲ್!

Share on facebook
Share on twitter
Share on linkedin
Share on whatsapp
Share on telegram
Share on email
Share on print

ತಿರುವನಂತಪುರಮ್: ಕೋವಿಡ್ ಸಾಂಕ್ರಾಮಿಕ ರೋಗದ ಬಗ್ಗೆ  ಜನಜಾಗೃತಿ ಮೂಡಿಸುವ ಸಲುವಾಗಿ ಕೇರಳ ಪೋಲೀಸರು ಬಿಡುಗಡೆಗೊಳಿಸಿರುವ ಹೊಚ್ಚ ಹೊಸ ವೀಡಿಯೋ ದೇಶಾದ್ಯಂತ ವೈರಲ್ ಆಗುತ್ತಿದೆ. ತಮಿಳಿನ ಹಿಟ್ ಹಾಡು ಎಂಜಾಯ್ ಎಂಜಾಮಿಧಾಟಿಯಲ್ಲಿ ಮಾಡಲಾಗಿದ್ದು, ಸಮವಸ್ತ್ರದಲ್ಲಿರುವ ಒಂಭತ್ತು ಮಂದಿ ಪೋಲೀಸರು ಇದರಲ್ಲಿ ನೃತ್ಯಮಾಡಿದ್ದಾರೆ.

ಒಂದೂವರೆ ನಿಮಿಷ ಕಾಲಾವಧಿಯ ಹಾಡಿನಲ್ಲಿ ಸರಿಯಾಗಿ ಮಾಸ್ಕ್ ಹಾಕಿಕೊಳ್ಳಿ, ದೈಹಿಕ ಅಂತರ ಕಾಪಾಡಿಕೊಳ್ಳಿ, ಸ್ಯಾನಿಟೈಝರ್ ಜೊತೆಯಲ್ಲಿರಲಿ, ಲಸಿಕೆ ತೆಗೆದುಕೊಳ್ಳಿ ಮೊದಲಾದ ವಿಷಯಗಳನ್ನು ಹೇಳಲಾಗಿದೆ.

ಕೇರಳ ಪೋಲೀಸರ ಸಾಮಾಜಿಕ ಜಾಲತಾಣ ಖಾತೆಗಳಲ್ಲಿಕೋವಿಡ್ ಸಾಂಕ್ರಾಮಿಕದ ವಿರುದ್ಧ ಒಂದಾಗಿ ಹೋರಾಡೋಣ, ಕೇರಳ ಪೋಲೀಸ್ ಯಾವತ್ತೂ ನಿಮ್ಮೊಂದಿಗಿದೆ ಎಂಬ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಜನಮನ ಗೆದ್ದಿರುವ ಹಾಡಿನ ವೀಡಿಯೋ ದೇಶಾದ್ಯಂತ ಮಿಂಚಿನಂತೆ ವೈರಲಾಗಿದೆಯಲ್ಲದೇ ದೊಡ್ಡ ಸಂಖ್ಯೆಯ ಜನರು ವೀಕ್ಷಿಸಿದ್ದಾರೆ. ಭಾರೀ ಪ್ರಮಾಣದಲ್ಲಿ ಲೈಕ್, ಕಮೆಂಟ್ ಮತ್ತು ಶೇರುಗಳನ್ನು ಗಳಿಸಿದೆ.

ವೀಡಿಯೋ ನೋಡಿ

ಅಂದ ಹಾಗೆ ಕೇರಳ ಪೋಲೀಸರು ಇಂತಹ ಹಾಡಿನ ವೀಡಿಯೋ ಬಿಡುಗಡೆಗೊಳಿಸುವುದು ಇದು ಮೊದಲ ಬಾರಿಯೇನೂ ಅಲ್ಲ. ಮೊದಲೂ ಕೈ ತೊಳೆಯುವ ವಿಚಾರದಲ್ಲಿ ಹಾಡಿನ ಮೂಲಕ ಜನಜಾಗೃತಿ ಮಾಡಿದ್ದರು. ಅದು ಮಲಯಾಳಂ ಚಲನಚಿತ್ರಅಯ್ಯಪ್ಪನುಮ್ ಕೋಶಿಯುಮ್ಚಿತ್ರದಕಲಕತ್ತಾಹಾಡಿನ ಧಾಟಿಯಲ್ಲಿತ್ತು.

ಹೊಸ ಹಾಡನ್ನು ಕೇರಳ ಪೋಲೀಸ್ ಮಾಧ್ಯಮ ಕೇಂದ್ರದ ಉಪ ನಿರ್ದೇಶಕರಾದ ವಿಪಿ ಪ್ರಮೋದ್ ಕುಮಾರ್ ನಿರ್ದೇಶಿಸಿದ್ದಾರೆ. ಆದಿತ್ಯ ಎಸ್ ನಾಯರ್ ಮತ್ತು ರಾಜೇಶ್ ಲಾಲ್ ವಂಶ ರಚಿಸಿದ ಹಾಡಿಗೆ ನಹೂಮ್ ಅಬ್ರಹಾಮ್ ಮತ್ತು ನೀಲಾ ಜೋಸೆಫ್ ಸ್ವರ ನೀಡಿದ್ದಾರೆ. ಹೇಮಂತ್ ಆರ್ ನಾಯರ್, ಶಿಫಿನ್ ಸಿ ರಾಜ್ ಮತ್ತು ರಾಜೀವ್ ಸಿಪಿ ಚಿತ್ರೀಕರಣ ಮಾಡಿದವರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು