ಕಣ್ಣೂರು : ತನ್ನ ಮಗಳ ಮದುವೆಯ ಜೊತೆಗೆ ಬಡ ಕುಟುಂಬದ 5 ಹೆಣ್ಮಕ್ಕಳಿಗೆ ಮದುವೆ ಮಾಡಿಸುವ ಮೂಲಕ ಮಾದರಿಯಾದ ಸಲೀಂ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೇರಳದ ಕಣ್ಣೂರು ಮೂಲದ ಸಲೀಂ ಎಂಬುವವರು ತನ್ನ ಮಗಳ ಜೊತೆಗೆ ಇತರೆ ಐವರು ಹೆಣ್ಣು ಮಕ್ಕಳ ಮದುವೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಕಣ್ಣೂರಿನ ಎಡಚೆರಿ ಮೂಲದ ಸಲೀಂ, ತನ್ನ ಮಗಳು ರಮೀಸಾ ಮದುವೆ ಜತೆಗೆ ವಯನಾಡು, ಎಡಚೆರಿ, ಗುಡಲೂರ್ , ಮಲಪ್ಪುರಂ ಮತ್ತು ಮೆಪ್ಪಯ್ಯುರ್ ಮೂಲದ ಬಡ ಕುಟುಂಬದ ಯುವತಿಯರಿಗೆ ಅವರವರ ಧರ್ಮದ ಶಾಸ್ತ್ರಕ್ಕನುಗುಣವಾಗಿ ಮದುವೆ ಮಾಡುವ ಮೂಲಕ ಧರ್ಮಕ್ಕಿಂತ ಮಾನವೀಯತೆಯೇ ದೊಡ್ಡದು ಎಂಬುದನ್ನು ಸಾರಿದ್ದಾರೆ.

ಸಾಮೂಹಿಕ ಮದುವೆಯಲ್ಲಿ ಎರಡು ಮದುವೆ ಹಿಂದು ಸಂಪ್ರದಾಯದಂತೆ ನಡೆದರೆ, ಉಳಿದ ಮೂರು ಮದುವೆ ಇಸ್ಲಾಮಿಕ್ ಪದ್ಧತಿಯಂತೆ ಜರುಗಿದೆ. ಮುನವ್ವರ ಅಲಿ ಶಿಹಾಬ್ ತಂಗಳ ಎಂಬುವರು ವಿವಾಹವನ್ನು ನೆರವೇರಿಸಿದರು. ಸಲೀಂ ಮಗಳು ರಮೀಸಾ ಸೇರಿದಂತೆ ಎಲ್ಲರೂ ಒಂದೇ ರೀತಿಯ ಸೀರೆಯನ್ನು ಧರಿಸಿದ್ದರು. ಈ ಮೂಲಕ ನಾವೆಲ್ಲರೂ ಭಾರತೀಯರು ಎಂಬ ಸಂದೇಶದ ಜತೆಗೆ ನಾವೆಲ್ಲರೂ ಸಮಾನರು ಎಂದು ಸಾರಿದರು. ಇನ್ನು ಸಲೀಂ ಐದೂ ಹೆಣ್ಣುಮಕ್ಕಳಿಗೂ ತಲಾ 10 ಸವರನ್ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು