ಆಡಳಿತದಲ್ಲಿ ರ್ಯಾಂಕ್ ಪಡೆದ ಪಿಣರಾಯ್ ವಿಜಯನ್ | ಯೋಗಿ ಆದಿತ್ಯನಾಥ್ ಫೈಲ್!

Public Affairs Index
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(31-10-2020): ಕೇರಳವನ್ನು ದೇಶದ ಅತ್ಯುತ್ತಮ ಆಡಳಿತ ರಾಜ್ಯವೆಂದು ಆಯ್ಕೆಮಾಡಿದರೆ, ದೊಡ್ಡ ರಾಜ್ಯಗಳ ವಿಭಾಗದಲ್ಲಿ ಉತ್ತರ ಪ್ರದೇಶ ಅತ್ಯಂತ ಕೆಳಭಾಗದಲ್ಲಿದೆ ಎಂದು ಬೆಂಗಳೂರಿನ ಸಾರ್ವಜನಿಕ ವ್ಯವಹಾರಗಳ ಕೇಂದ್ರ ಬಿಡುಗಡೆ ಮಾಡಿದ ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕ -2020 ತಿಳಿಸಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)  ಮಾಜಿ ಅಧ್ಯಕ್ಷ ಕೆ  ಕಸ್ತುರಿರಂಗನ್ ನೇತೃತ್ವದ ನಗರ ಮೂಲದ ಲಾಭರಹಿತ ಸಂಸ್ಥೆ ಈ ವರದಿಯನ್ನು ಮಾಡಿದೆ.

ದಕ್ಷಿಣದ ನಾಲ್ಕು ರಾಜ್ಯಗಳಾದ ಕೇರಳ (1.388 ಪಿಎಐ ಇಂಡೆಕ್ಸ್ ಪಾಯಿಂಟ್), ತಮಿಳುನಾಡು (0.912), ಆಂಧ್ರಪ್ರದೇಶ (0.531) ಮತ್ತು ಕರ್ನಾಟಕ (0.468) ಆಡಳಿತದ ದೃಷ್ಟಿಯಿಂದ ದೊಡ್ಡ ರಾಜ್ಯ ವಿಭಾಗದಲ್ಲಿ ಮೊದಲ ನಾಲ್ಕು ಸ್ಥಾನಗಳಲ್ಲಿವೆ ಎಂದು ಅದು ಹೇಳಿದೆ.

ನಕಾರಾತ್ಮಕ ಅಂಕಗಳನ್ನು ಗಳಿಸಿದ ಉತ್ತರ ಪ್ರದೇಶ, ಒಡಿಶಾ ಮತ್ತು ಬಿಹಾರ ರ್ಯಾಂಕಿಂಗ್‌ನ ಕೆಳಭಾಗದಲ್ಲಿದೆ.ಈ ರಾಜ್ಯಗಳು ಕ್ರಮವಾಗಿ 1.461, -1.201 ಮತ್ತು -1.158 ಅಂಕಗಳನ್ನು ಪಡೆದುಕೊಂಡಿದೆ.

ಸಣ್ಣ ರಾಜ್ಯ ವಿಭಾಗದಲ್ಲಿ ಗೋವಾ 1.745 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದರೆ, ಮೇಘಾಲಯ (0.797) ಮತ್ತು ಹಿಮಾಚಲ ಪ್ರದೇಶ (0.725) ನಂತರದ ಸ್ಥಾನದಲ್ಲಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು