ಕೇರಳದಲ್ಲಿ ಪಿಣರಾಯ್ ಪ್ರಚಂಡ ‘ವಿಜಯನ್’ | ರಾಜ್ಯದಲ್ಲಿ ಇನ್ನಷ್ಟು ಬಿಗಿಗೊಂಡ ಕಮ್ಯೂನಿಸ್ಟ್ ಹಿಡಿತ

Share on facebook
Share on twitter
Share on linkedin
Share on whatsapp
Share on telegram
Share on email
Share on print

ತಿರುವನಂತಪುರಂ: ಧರ್ಮಢಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೇರಳ ಸಿಎಂ ಪಿಣರಾಯ್ ವಿಜಯನ್, ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇವರು ಬಿಜೆಪಿಯ ಸಿಕೆ ಪದ್ಮನಾಭನ್ ಮತ್ತು ಕಾಂಗ್ರೆಸ್ಸಿನ ರಘುನಾಥ್ ವಿರುದ್ಧ ಸ್ಪರ್ಧಿಸಿದ್ದರು. ಪಿಣರಾಯ್ ವಿಜಯನ್ 50123 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ಟೀಚರ್ ಕೂಡಾ ಗೆಲುವು ಸಾಧಿಸಿದ್ದಾರೆ. ಬಿಜೆಪಿ ನಾಯಕ ರಾಜಶೇಖರ್ ಕುಮ್ಮನಮ್ ಸೋತಿದ್ದಾರೆ. ಕಳೆದ ಬಾರಿ ದೊರೆತಿದ್ದ ಏಕೈಕ ಸ್ಥಾನವೂ ಬಾರಿ ಬಿಜೆಪಿಗೆ ಕೈಕೊಟ್ಟಿದೆ.

ಕೇರಳದಲ್ಲಿ ಮಾರ್ಕ್ಸ್ ವಾದಿ ಕಮ್ಯೂನಿಸ್ಟ್ ಪಕ್ಷದ ನೇತೃತ್ವದ ಎಲ್ ಡಿ ಎಫ್ ಮೈತ್ರಿಕೂಟವು 99 ಸ್ಥಾನಗಳಲ್ಲಿ ವಿಜಯಗಳಿಸಿ, ಸ್ಪಷ್ಠ ಬಹುಮತ ಪಡೆದಿದೆ. ಮೂಲಕ ಕಳೆದ ನಲ್ವತ್ತು ವರ್ಷಗಳ ಕೇರಳದ ಇತಿಹಾಸದಲ್ಲೇ ಸತತವಾಗಿ ಅಧಿಕಾರಕ್ಕೇರಿದ ಮೈತ್ರಿಕೂಟವಾಗಿ ಎಲ್ಡಿಎಫ್ ಹೊರಹೊಮ್ಮಿದೆ.

ಸಮಾಜ ಸೇವಕನಾಗಿ ಗುರುತಿಸಿಕೊಂಡು , ನಂತರ ರಾಜಕೀಯ ಪ್ರವೇಶಿದ್ದ ಫಿರೋಝ್ ಕುನ್ನುಂಪರಂಬಿಲ್, ತವನೂರು ಕ್ಷೇತ್ರದಲ್ಲಿ ಸೋಲುಂಡಿದ್ದಾರೆ. ಇವರ ವಿರುದ್ಧ ಸ್ಪರ್ಧಿಸಿದ್ದ ಕೆ.ಟಿ ಜಲೀಲ್ ಕೂದಲೆಲೆಯ ಅಂತರದಲ್ಲಿ ಜಯಗಳಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು