ಇಬ್ಬರು ದಲಿತ ಹೆಣ್ಣುಮಕ್ಕಳ ನಿಗೂಢ ಸಾವು| ಮೂರು ವರ್ಷ ಕಳೆದರೂ ಸಿಗದ ನ್ಯಾಯ, ಮತ್ತೆ ಬೀದಿಗಿಳಿದ ತಾಯಿ

protest
Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೇರಳ(27-10-2020): ಮೂರು ವರ್ಷಗಳ ಹಿಂದೆ ಕೇರಳದ ವಲಾಯಾರ್‌ನಲ್ಲಿ ಲೈಂಗಿಕ ದೌರ್ಜನ್ಯ, ಅಪ್ರಾಪ್ತ ಹೆಣ್ಣುಮಕ್ಕಳ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದಲಿತ ಮಹಿಳೆಯೊಬ್ಬರು ನ್ಯಾಯ ಕೋರಿ ಮತ್ತೊಂದು ಸುತ್ತಿನ ಪ್ರತಿಭಟನೆಯನ್ನು ಪ್ರಾರಂಭಿಸಿದ್ದಾರೆ.

ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿಥಲಾ ಮತ್ತು ಭಾರತೀಯ ಜನತಾ ಪಕ್ಷದ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಅವರು ಧರಣಿ ನಡೆಸುತ್ತಿರುವ ತಾಯಿಯನ್ನು ಭೇಟಿಯಾಗಿದ್ದಾರೆ.

ಇದು ಉತ್ತರ ಪ್ರದೇಶದ ಹತ್ರಾಸ್ ಪ್ರಕರಣಕ್ಕಿಂತ ಕೆಟ್ಟದಾಗಿದೆ. ಕಣ್ಣೀರು ಸುರಿಸುವ ತಾಯಿ ಒಂದೆಡೆ, ಇನ್ನೊಂದೆಡೆ ತಮ್ಮ ಸ್ವಂತ ಹಿತ್ತಲಿನಲ್ಲಿ ನಡೆದ ಎರಡು ಕೊಲೆಗಳನ್ನು  ನಿರ್ಲಕ್ಷಿಸಲಾಗಿದೆ. ಮತ್ತೊಂದು ಸುತ್ತಿನ ಹೋರಾಟವನ್ನು ಪ್ರಾರಂಭಿಸಲು ತಾಯಿಯನ್ನು ಒತ್ತಾಯಿಸುವುದು ದುಃಖಕರವಾಗಿದೆ ಎಂದು ಚೆನ್ನಿತಾಲ ಹೇಳಿದರು. ಪ್ರಕರಣವನ್ನು ದಿಕ್ಕುತಪ್ಪಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಅವರು ಕೋರಿದ್ದಾರೆ.

12 ಮತ್ತು ಎಂಟು ವರ್ಷ ವಯಸ್ಸಿನ ಇಬ್ಬರು ಸಹೋದರಿಯರು ತಮ್ಮ ಮನೆಯಲ್ಲಿ 2017 ರಲ್ಲಿ ಪೋಷಕರು ಕೆಲಸಕ್ಕೆ ಹೋದಾಗ 52 ದಿನಗಳ ಅವಧಿಯಲ್ಲಿ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಪ್ರಕರಣವು ಅಂದಿನಿಂದ ಅನೇಕ ತಿರುವುಗಳನ್ನು ಕಂಡಿದೆ. ಕಳೆದ ತಿಂಗಳು ಕೇರಳ ಸರ್ಕಾರ ಈ ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಿಲ್ಲ ಮತ್ತು ಮರು ತನಿಖೆಗೆ ಸಿದ್ಧವಾಗಿದೆ ಎಂದು ಹೈಕೋರ್ಟ್‌ಗೆ ತಿಳಿಸಿತ್ತು. ನ್ಯಾಯಾಲಯದ ಮೇಲ್ವಿಚಾರಣೆಯ ಕೇಂದ್ರ ಏಜೆನ್ಸಿ ತನಿಖೆಗಾಗಿ ತಾಯಿ ಹೈಕೋರ್ಟ್‌ನನ್ನು ಸಂಪರ್ಕಿಸಿದ್ದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು