ಸಿಬಿಐಗೆ ಅಂಕುಶ ಹಾಕಿದ ಕೇರಳ ಸಚಿವ ಸಂಪುಟ

Share on facebook
Share on twitter
Share on linkedin
Share on whatsapp
Share on telegram
Share on email
Share on print

ತಿರುವನಂತಪುರಂ(5-11-2020): ಇನ್ನು ಕೇರಳ ಸರಕಾರದ ಅನುಮತಿಯಿಲ್ಲದೇ ಅಲ್ಲಿನ ಪ್ರಕರಣಗಳ ತನಿಖೆಯನ್ನು ಸಿಬಿಐ ನೇರವಾಗಿ ಕೈಗೆತ್ತಿಕೊಳ್ಳುವಂತಿಲ್ಲ. ಇಂತಹ ಒಂದು ತೀರ್ಮಾನವನ್ನು ಕೇರಳ ಮಂತ್ರಿ ಮಂಡಲವು ಕೈಗೊಂಡಿತು.

ಸಿಬಿಐ ಕೇಂದ್ರದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂಬ ಆರೋಪ ಮೊದಲಿನಿಂದಲೂ ಇತ್ತು. ಇತ್ತೀಚಿಗೆ ಇದೇ ವಿಚಾರದಲ್ಲಿ ಮಹಾರಾಷ್ಟ್ರ ಸರಕಾರವೂ ತಗಾದೆ ತೆಗೆದಿತ್ತು. ರಾಜ್ಯದ ಸಂವಿಧಾನಾತ್ಮಕ ನಡೆಗಳಲ್ಲೂ ಕೇಂದ್ರದ ಏಜೆನ್ಸಿಗಳು ಮೂಗು ತೂರಿಸುತ್ತಿವೆಯೆಂದು ಕೇರಳ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದರು.

ಕೇಂದ್ರದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಂದಿನಿಂದಲೂ ಬಿಜೆಪಿಯೇತರ ಆಡಳಿತವಿರುವ ರಾಜ್ಯ ಸರಕಾರಗಳೊಂದಿಗೆ ಒಂದಿಲ್ಲೊಂದು ಸಂಘರ್ಷ ಉಂಟಾಗುತ್ತಲೇ ಇದೆ. ಇದೀಗ ಸಿಬಿಐಗೆ ಅಂಕುಶ ಹಾಕಿರುವುದು ಕೂಡಾ ಅದರ ಒಂದು ಭಾಗ. ಇನ್ನು ರಾಜ್ಯದ ಪ್ರಕರಣಗಳನ್ನು ಕೇರಳ ಸರಕಾರದ ಅನುಮತಿಯಿಲ್ಲದೇ ಸಿಬಿಐ ತನಿಖೆ ನಡೆಸುವಂತಿಲ್ಲ. ಅದರೆ ಈಗ ನಡೆಸುತ್ತಿರುವ ಕೇಸುಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು