ಕೇಂದ್ರ ಸರಕಾರದ ಲಸಿಕಾ ನೀತಿಯು ಮೂಲಭೂತ ಹಕ್ಕುಗಳ ಉಲ್ಲಂಘನೆ : ಸುಪ್ರೀಮ್ ಕೋರ್ಟ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಕೇಂದ್ರ ಸರಕಾರದ ಲಸಿಕಾ ನೀತಿಯು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದ್ದು, ಅದನ್ನು ಬದಲಿಸಬೇಕಿದೆ ಎಂದು ಸುಪ್ರೀಮ್ ಕೋರ್ಟ್ ಕೇಂದ್ರ ಸರಕಾರಕ್ಕೆ ತಾಕೀತು ಮಾಡಿದೆ.

ದೇಶದಲ್ಲಿ ಕಂಡು ಬರುತ್ತಿರುವ ಆಕ್ಸಿಜನಿನ ಕೊರತೆ ನೀಗಿಸಬೇಕು. ಇದಕ್ಕಾಗಿ ನಾಲ್ಕು ದಿನಗಳೊಳಗೆ ಸಾಕಷ್ಟು ಆಕ್ಸಿಜನ್ ಸಂಗ್ರಹ ಮಾಡಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಕೋವಿಡ್ ಸಾಂಕ್ರಾಮಿಕ ರೋಗವನ್ನು ತಡೆಯುವುದಕ್ಕಾಗಿ ಲಾಕ್ಡೌನ್ ಜಾರಿ ಮಾಡುವ ಕುರಿತು ಚಿಂತಿಸಬೇಕು. ಲಾಕ್ಡೌನ್ ಜಾರಿಗೊಳಿಸಿದರೆ, ದುರ್ಬಲ ವರ್ಗದವರಿಗೆ ಬೇಕಾದ ಅಗತ್ಯ ನೆರವನ್ನು ಕೇಂದ್ರ ಸರಕಾರವೇ ಖಾತರಿಪಡಿಸಿಕೊಳ್ಳಬೇಕು.

ರೋಗಿಗಳನ್ನು ಆಸ್ಪತ್ರೆಗೆ ಸೇರಿಸುವ ವಿಚಾರದಲ್ಲಿ ರಾಷ್ಟ್ರೀಯ ಕಾನೂನನ್ನು ರೂಪಿಸಬೇಕು. ಅಲ್ಲಿಯವರೆಗೆ ಸ್ಥಳೀಯ ದಾಖಲೆಗಳಿಲ್ಲವೆಂಬ ಕಾರಣ ನೀಡಿ, ರೋಗಿಗಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವುದನ್ನು ತಡೆಯಬಾರದು ಎಂದೂ ತನ್ನ ಆದೇಶದಲ್ಲಿ ಹೇಳಿದೆ.

ಕೋವಿಡ್ ಸಾಂಕ್ರಾಮಿಕ ರೋಗವು ದೇಶದಲ್ಲಿ ತಂದ ಸಂದಿಗ್ಧತೆ ಮತ್ತು ಕೇಂದ್ರ ಸರಕಾರದ ಅಪಕ್ವ ನಡೆಗಳ ಹಿನ್ನೆಲೆಯಲ್ಲಿ  ಸುಪ್ರೀಮ್ ಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಇದರ ವಿಚಾರಣೆಯ ವೇಳೆ ಸುಪ್ರೀಮ್ ಈ ರೀತಿಯ ಮಧ್ಯಂತರ ಅದೇಶಗಳನ್ನು ನೀಡಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು