ಕೇಂದ್ರ ಸರಕಾರಕ್ಕೆ ನಿರಂತರ ಚಾಟಿ ಬೀಸುತ್ತಲೇ ಇರುವ ದೆಹಲಿ ಹೈಕೋರ್ಟ್ | “ವಿದೇಶೀ ನೆರವು ಬಂದಿರುವುದು ಜನರಿಗಾಗಿ; ಸಂಗ್ರಹಗಾರದಲ್ಲಿ ಕೊಳೆಯಲು ಅಲ್ಲ”

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ವೈದ್ಯಕೀಯ ಸಲಕರಣೆಗಳ ವಿದೇಶೀ ನೆರವು ಬಂದಿರುವುದು ಯಾವುದೇ ಸಂಸ್ಥೆಗಳ ಸಂಗ್ರಹಗಾರದಲ್ಲಿ ಕೊಳೆತು ಹೋಗಲು ಅಲ್ಲ ಎಂದು ದೆಹಲಿ ಹೈಕೋರ್ಟ್ ಕೋರ್ಟ್ ಕೇಂದ್ರ ಸರಕಾರಕ್ಕೆ ಖಾರವಾಗಿ ಹೇಳಿದೆ.

ವಿದೇಶಗಳಿಂದ ಬರುತ್ತಿರುವ ನೆರವುಗಳ ವಿತರಣೆಗೆ ಯಾವ ವಿಧಾನವನ್ನು ಅನುಸರಿಸಲಾಗುತ್ತಿದೆ ಎಂದು ನ್ಯಾಯಾಲಯವು ಕೇಂದ್ರವನ್ನು ಕೇಳಿದೆ.

ದೆಹಲಿಯ ಲೇಡಿ ಹಾರ್ಡಿಂಜ್ ಮೆಡಿಕಲ್ ಕಾಲೇಜಿನಲ್ಲಿ 260 ಆಕ್ಸಿಜನ್ ಕಾನ್ಸಂಟ್ರೇಟರ್ ಉಪಯೋಗ ಶೂನ್ಯವಾಗಿ ಬಿದ್ದಿದೆ. ಅಲ್ಲೀಗ ಅದರ ಅಗತ್ಯವಿಲ್ಲ. ವ್ಯವಸ್ಥಿತ ವಿತರಣೆ ಮಾಡದಿದ್ದರೆ ಅಗತ್ಯವಿದ್ದವರಿಗೆ ತಲುಪುವುದಿಲ್ಲ ಎಂದು ವಿಚಾರಣೆಯ ಅಮಿಕಸ್ ಕ್ಯೂರಿ, ರಾಜಶೇಖರ್ ರಾವ್  ಹೇಳಿದಾಗ, ಹೈಕೋರ್ಟ್ ಕೇಂದ್ರದಕ್ಕೆ ವಿವರಣೆ ಕೇಳಿತು.

ಕೋವಿಡ್ ಸಮಯದಲ್ಲಿ ಜನರ ಸೇವೆಯಲ್ಲಿ ಏರ್ಪಟ್ಟಿರುವ ಗುರುದ್ವಾರ ಮತ್ತು ಎನ್‍ಜಿಓ ಗಳಿಗೆ ವಿದೇಶಗಳಿಂದ ಬಂದ ನೆರವನ್ನು ನೀಡಬೇಕೆಂದು ಸಲಹೆ ನೀಡಿದ ಹೈಕೋರ್ಟ್, ವಿದೇಶೀ ನೆರವು ಬಂದಿರುವುದು. ಸಂಗ್ರಹಗಾರಗಳಲ್ಲಿ ರಾಶಿ ಹಾಕಲು ಅಲ್ಲ ಎಂಬುದನ್ನು ಸರಕಾರಕ್ಕೆ ನೆನಪಿಸಿತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು