ನವದೆಹಲಿ: ರಾಜ್ಯಗಳಿಗೆ ಕೇಂದ್ರ ಸರಕಾರದ ಕಾನೂನುಗಳ ವಿರುದ್ಧ ಅಭಿಪ್ರಾಯ ಮಂಡಿಸುವ ಹಕ್ಕಿಲ್ಲವೇ? ಎಂದು ದೂರುದಾರ ಸ್ವಯಂ ಸೇವಾ ಸಂಸ್ಥೆಗೆ ಸುಪ್ರೀಮ್ ಕೋರ್ಟ್ ಪ್ರಶ್ನಿಸಿದೆ. ಈ ಬಗ್ಗೆ ಹೆಚ್ಚಿನ ವಿಚಾರಗಳನ್ನು ತಿಳಿದುಕೊಂಡುಬರುವಂತೆ ಸೂಚಿಸಿದೆ.
ಸಿಎಎ ಮತ್ತು ಕೃಷಿ ಕಾನೂನುಗಳ ವಿರುದ್ಧ ರಾಜ್ಯಗಳಲ್ಲಿ ನಿರ್ಣಯ ಅಂಗೀಕಾರವನ್ನು ಪ್ರಶ್ನಿಸಿ ಸ್ವಯಂ ಸೇವಾಸಂಸ್ಥೆಯೊಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್ ಈ ರೀತಿಯಾಗಿ ಸೂಚನೆ ನೀಡಿದೆ.
ಕೇರಳ, ಪಶ್ಚಿಮ ಬಂಗಾಳ, ಪಂಜಾಬ್, ರಾಜಸ್ಥಾನ ರಾಜ್ಯಗಳು ಕೇಂದ್ರ ಸರಕಾರದ ಸಿಎಎ ಮತ್ತು ವಿವಾದಿತ ಕೃಷಿಕಾಯ್ದೆಗಳ ವಿರುದ್ಧ ನಿರ್ಣಯವನ್ನು ಅಂಗೀಕರಿಸಿತ್ತು. ಇದರ ವಿರುದ್ಧ ಹಲವು ಅರ್ಜಿಗಳನ್ನು ಸುಪ್ರೀಮ್ ಕೋರ್ಟಿನಲ್ಲಿ ಸಲ್ಲಿಸಲಾಗಿತ್ತಾದರೂ, ಅವುಗಳೆಲ್ಲವೂ ವಜಾಗೊಂಡಿದೆ. ಇಂದಿನ ವಿಚಾರಣೆಯ ವೇಳೆ ಈ ವಿಚಾರವನ್ನೂ ಸುಪ್ರೀಂಕೋರ್ಟ್ ದೂರುದಾರ ಸ್ವಯಂ ಸೇವಾ ಸಂಸ್ಥೆಯ ಗಮನಕ್ಕೆ ತಂದಿದೆ.