ಕೆಲವೇ ದಿವಸಗಳಲ್ಲಿ ರಷ್ಯಾ ನಿರ್ಮಿತ ಸ್ಪುಟ್ನಿಕ್ ಲಸಿಕೆಗೂ ಅನುಮತಿ | ಲಸಿಕೆ ಕೊರತೆ ನೀಗಿಸುವಲ್ಲಿ ಮಹತ್ವದ ಹೆಜ್ಜೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಇನ್ನು ಹತ್ತು ದಿನಗಳಲ್ಲಿ ರಷ್ಯಾ ನಿರ್ಮಿತ ಸ್ಪುಟ್ನಿಕ್ ಲಸಿಕೆಯನ್ನು ಬಳಸಲು ಅನುಮತಿ ದೊರಕಲಿದೆ. ಇದು ದೇಶದಲ್ಲಿ ಲಸಿಕೆಯ ಕೊರತೆಯನ್ನು ನೀಗಿಸುವಲ್ಲಿ ಮಹತ್ವದ ಹೆಜ್ಜೆಯಾಗಲಿದೆ.

ಹೈದರಾಬಾದಿನಲ್ಲಿರುವ ರೆಡ್ಡೀಸ್ ಲ್ಯಾಬೊರೇಟರಿಯ ಸಹಯೋಗದೊಂದಿಗೆ ಪ್ರತಿ ತಿಂಗಳು 850 ಮಿಲಿಯನ್ ಡೋಸ್ ಸ್ಪುಟ್ನಿಕ್ ಲಸಿಕೆ ಉತ್ಪಾದಿಸಲು ಈಗಲೇ ಸಿದ್ಧತೆ ನಡೆಸಲಾಗುತ್ತಿದೆ. ಇದು ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ಎರಡನೇ ಅಲೆಯ ತೀವ್ರತೆಯನ್ನು ಕಡಿಮೆಗೊಳಿಸಲು ಸಹಾಯಕವಾಗಲಿದೆ. 

ಅದೇ ವೇಳೆ ಜಾನ್ಸನ್ ಆ್ಯಂಡ್ ಜಾನ್ಸನ್, ಸಿರಮ್ ಸಂಸ್ಥೆಯ ನೋವಾವ್ಯಾಕ್ಸ್, ಭಾರತ್ ಬಯೋಟೆಕ್ ಸಂಸ್ಥೆಯ ಇಂಟ್ರಾನಾಸಲ್ ಇತ್ಯಾದಿ ಲಸಿಕೆಗಳನ್ನು ಬಳಸಲು ಅಕ್ಟೋಬರ್ ತಿಂಗಳಲ್ಲಿ ಅನುಮತಿ ದೊರೆಯುವ ಸಾಧ್ಯತೆಯಿದೆಯೆಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

ಜೊತೆಗೆ ಈಗಾಗಲೇ ತಮ್ಮ ಸಂಗ್ರಹದಲ್ಲಿರುವ ಲಸಿಕೆಯ ಪ್ರಮಾಣದ ಮಾಹಿತಿಯನ್ನು ತುರ್ತಾಗಿ ನೀಡಬೇಕೆಂದು ಕೇಂದ್ರ ಸರಕಾರವು ರಾಜ್ಯಗಳಿಗೆ ಸೂಚಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು