ಗಲ್ಫ್ ನ್ಯೂಸ್(12-10-2020): ಜಪಾನ್ ನಿರ್ಮಿತ ಕೊರೋನಾ ಔಷಧಿ ಫಲಪ್ರದವಾಗಿದೆ. ಈಗಾಗಲೇ ಕೊರೋನಾ ರೋಗಿಗಳಿಗೆ ಈ ಔಷಧಿ ನೀಡಲಾಗುತ್ತಿದೆ. ಇದರಿಂದ ರೋಗ ಗುಣವಾಗುವ ಸಾಧ್ಯತೆ ಹೆಚ್ಚಿದೆಯೆಂದು ಕತರ್ ರಕ್ಷಣಾ ಸಚಿವಾಲಯದ ಆರೋಗ್ಯ ಸೇವಾ ವಿಭಾಗದ ಉನ್ನತ ಅಧಿಕಾರಿ ಹೇಳಿದ್ದಾರೆ.
ಬ್ರಿಗೇಡಿಯರ್ ಜನರಲ್ ಡಾ| ಆಜಾದ್ ಅಹ್ಮದ್ ಖಲೀಲ್ ಸ್ಥಳೀಯ ಮಾಧ್ಯಮದ ಜೊತೆಗೆ ಮಾತನಾಡುತ್ತಾ ಈ ಮಾಹಿತಿಯನ್ನು ಹಂಚಿಕೊಂಡರು. ಕೊರೋನಾ ರೋಗವನ್ನು ಹಿಮ್ಮೆಟ್ಟಿಸಲು ಜಪಾನ್ ನಿರ್ಮಿತ ಔಷಧಿಯನ್ನು ಕತರ್ ಖರೀದಿಸಿದೆ. ಅದು ರೋಗವನ್ನು ಗುಣಪಡಿಸುವಲ್ಲಿ ಸಫಲತೆ ಕಂಡಿದೆ.
ಗಂಭೀರಾವಸ್ಥೆಯಲ್ಲಿದ್ದ 1500 ಕೊರೋನಾ ರೋಗಿಗಳಿಗೆ ಈ ಮದ್ದು ನೀಡಲಾಗಿದೆ. ಅವರೆಲ್ಲರೂ ಈಗ ಗುಣಮುಖರಾಗಿ ಸಹಜ ಜೀವನಕ್ಕೆ ಮರಳಿದ್ದಾರೆ. ಪ್ಲಾಸ್ಮಾ ಚಿಕಿತ್ಸೆ ನೀಡಿಯೂ ಸಾಕಷ್ಟು ಜನರು ರೋಗದಿಂದ ಮುಕ್ತಿ ಪಡೆದಿದ್ದಾರೆ.
ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಐದು ವೈದ್ಯಕೀಯ ಘಟಕಗಳನ್ನು ಸ್ವತಃ ಪಿಸಿಆರ್ ಪರೀಕ್ಷೆ ನಡೆಸಲು ಸಾಧ್ಯವಾಗುವಂತೆ ಸಿದ್ಧಗೊಳಿಸಲಾಗಿದೆ. ಇದರಿಂದಾಗಿ 24 ಗಂಟೆಗಳೊಳಗೆ ಪರೀಕ್ಷೆಯ ಫಲಿತಾಂಶ ಪಡೆದುಕೊಳ್ಳಬಹುದೆಂದು ಅವರು ಹೇಳಿದರು.