ಜಮ್ಮುಕಾಶ್ಮೀರ; ನಿಷೇಧಾಜ್ಞೆಯ ನಡುವೆಯೂ ರಾಷ್ಟ್ರಧ್ವಜ ಹಾರಿಸಲೆತ್ನಿಸಿದ ಬಿಜೆಪಿ ಕಾರ್ಯಕರ್ತರ ಬಂಧನ

jammu
Share on facebook
Share on twitter
Share on linkedin
Share on whatsapp
Share on telegram
Share on email
Share on print

ಶ್ರೀನಗರ(26/10/2020): ಜಮ್ಮುಕಾಶ್ಮೀರದ ಲಾಲ್‌ ಚೌಕ್‌ ಬಳಿ ಇರುವ ಕ್ಲಾಕ್‌ ಟವರ್‌ ಮೇಲೆ ನಿಷೇಧಾಜ್ಞೆಯ ನಡುವೆಯೂ ತ್ರಿವರ್ಣ ಧ್ವಜ ಹಾರಿಸಲು ಮುಂದಾದ ಬಿಜೆಪಿಯ ಕಾರ್ಯಕರ್ತರನ್ನು ಸ್ಥಳೀಯ ಪೊಲೀಸರು  ಬಂಧಿಸಿದ್ದಾರೆ.

‘ನಿಷೇದಾಜ್ಞೆಯ ನಡುವೆಯೂ ಬಿಜೆಪಿ ಕಾರ್ಯಕರ್ತರ ಗುಂಪು ಅಕ್ರಮವಾಗಿ ಘಂಟಾ ಘರ್‌ ಮೇಲೆ ರಾಷ್ಟ್ರಧ್ವಜ ಹಾರಿಸಲು ಮುಂದಾಗಿದ್ದು,  ತಕ್ಷಣವೇ ಅವರನ್ನು ವಶಕ್ಕೆ  ಪಡೆದು ಕೋಟಿಬಾಗ್‌ ಠಾಣೆಗೆ ಕರೆದೊಯ್ಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ 14 ತಿಂಗಳ ಗೃಹ ಬಂಧನದಿಂದ ಬಿಡುಗಡೆಯಾದ ನಂತರ ಪಿಡಿಪಿ ಮುಖ್ಯಸ್ಥೆ ಜಮ್ಮು ಕಾಶ್ಮೀರ್ ಮಾಜಿ ಮುಖ್ಯಮಂತ್ರಿ  ಮೆಹಬೂಬಾ ಮುಫ್ತಿ, ಜಮ್ಮು ಮತ್ತು ಕಾಶ್ಮೀರದ ಧ್ವಜವನ್ನು ಮರಳಿ ಸ್ಥಾಪಿಸಬೇಕೆಂದು ಆಗ್ರಹಿಸಿದ್ದರು. ಇದನ್ನು ವಿರೋಧಿಸಿದ್ದ ಬಿಜೆಪಿ ಮುಫ್ತಿ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿ, ಘಂಟಾಘರ್ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಲು ಯತ್ನಿಸಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು