ಬೆಂಗಳೂರು(15-12-2020): ಕರ್ನಾಟಕದ ಕೋಲಾರದ ವಿಸ್ಟ್ರಾನ್ ಐಫೋನ್ ಉತ್ಪಾದನಾ ಘಟಕದಲ್ಲಿ ನಡೆದ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದಂತೆ 5,000 ಗುತ್ತಿಗೆ ಕಾರ್ಮಿಕರು ಸೇರಿದಂತೆ ಒಟ್ಟು 7,000 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕಾರ್ಮಿಕರು ಸಂಬಳವನ್ನು ಪಾವತಿಸಿಲ್ಲ ಎಂದು ವಿಧ್ವಂಸಕ ಕೃತ್ಯಕ್ಕೆ ಇಳಿದಿದ್ದು, ಸುಮಾರು 440 ಕೋಟಿ ರೂ. ನಷ್ಟವನ್ನು ಕಂಪನಿಯು ಉಲ್ಲೇಖಿಸಿದೆ.ಲೂಟಿ ವೇಳೆ ಸಾವಿರಾರು ಐಫೋನ್ ಗಳನ್ನು ಕಳ್ಳತನ ಮಾಡಲಾಗಿದೆ ಎಂದು ಕಂಪೆನಿ ಆರೋಪಿಸಿದೆ. ಹಿಂಸಾಚಾರದಲ್ಲಿ ಕಂಪನಿಯು 440 ಕೋಟಿ ರೂ. ನಷ್ಠವನ್ನು ತೋರಿಸಿದೆ.
ಈ ಕುರಿತು ಕೋಲಾರದ ವೇಮಗಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಎಫ್ ಐ ಆರ್ ಪ್ರಕಾರ ಆಸ್ತಿ, ಕಚೇರಿ ಸಾಮಗ್ರಿಗಳು, ವಾಹನ ಮತ್ತು ಇತರ ವಸ್ತುಗಳಿಗೆ ಹಾನಿಯಾಗಿದೆ ಎಂದು ದಾಖಲಾಗಿದೆ.