‘ಕರ್ನಾಟಕದಲ್ಲಿ ಶೀಘ್ರದಲ್ಲೇ ತಲೆಯೆತ್ತಲಿದೆ ಸರಕಾರಿ ಅಧೀನದ ಜುವೆಲ್ಲರಿ ಮಳಿಗೆಗಳು’ – ಸಚಿವ ಮುರುಗೇಶ್ ನಿರಾಣಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು : “ಸರಕಾರಿ ಅಧೀನದ ಆಭರಣಗಳ ಮಳಿಗೆಯನ್ನು ಶೀಘ್ರದಲ್ಲೇ ಕರ್ನಾಟಕ ಸರಕಾರದ ವತಿಯಿಂದ ತೆರೆಯಲಿಕ್ಕಿದೆ.ಈ ಮಳಿಗೆಯನ್ನು ಸರಕಾರವೇ ನಿರ್ವಹಣೆ ಮಾಡಲಿದ್ದು,ಗ್ರಾಹಕರ ಬೇಡಿಕೆ ತಕ್ಕಂತೆ ಆಭರಣಗಳನ್ನು ತಯಾರಿಸಲಿದೆ” ಎಂದು ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ಆರ್ ನಿರಾಣಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮೈಸೂರು ಸಿಲ್ಕ್ , ಮೈಸೂರು ಸ್ಯಾಂಡಲ್ ಸೋಪ್,ಕಾವೇರಿ ಕೈ ಮಗ್ಗ ( ಹ್ಯಾಂಡ್ ಲೂಮ್ಸ್ ) ಮಾದರಿಯಲ್ಲಿ ಸರ್ಕಾರಿ ಅಭರಣಗಳ ಮಳಿಗೆ ತೆರೆಯುವ ಮಹತ್ವದ ನಿರ್ಧಾರವನ್ನು ‌ ಇಲಾಖೆ ತೆಗೆದುಕೊಂಡಿದೆ.ಆರಂಭಿಕ ಹಂತ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಸರಕಾರಿ ಜುವೆಲ್ಲರಿ ಮಳಿಗೆಗಳು ಕಾರ್ಯಾರಂಭ ಮಾಡಲಿದೆ.ರಾಜ್ಯದಲ್ಲಿ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ಯವಾದರೆ ಮುಂದಿನ ಯೋಜನೆಯನ್ನು ತೀರ್ಮಾನಿಸಲಾಗುವುದು ಎಂದು ತಿಳಿಸದರು.

ಈ ಯೋಜನೆಯು ದೇಶದಲ್ಲೇ ಪ್ರಥಮ ವಿನೂತನ ಯೋಜನೆಯಾಗಿದ್ದು ಯಾವ ರೀತಿ ಜನರು ಇದಕ್ಕೆ ಸ್ಪಂದಿಸುತ್ತಾರೆ ಎಂಬವುದನ್ನು ಕಾದು ನೋಡ ಬೇಕಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು