ಇಂದಿನಿಂದ ನೈಟ್ ಕರ್ಪ್ಯೂ: ಈ ಕುರಿತ ಮಾಹಿತಿ ತಿಳಿದುಕೊಳ್ಳಿ…

yadiyoorappa
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(23-12-2020): ಕೋವಿಡ್-19 ಹೊಸ ಸ್ವರೂಪದ ವೈರಸ್ ಪತ್ತೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಇಂದಿನಿಂದ ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ನೈಟ್ ಕರ್ಪ್ಯೂ ವಿಧಿಸಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆದೇಶಿಸಿದ್ದಾರೆ.

ಇಂದಿನಿಂದ ಜನವರಿ 2ರವರೆಗೆ ನೈಟ್ ಕರ್ಪ್ಯೂ ಜಾರಿಗೊಳಿಸಲಾಗುತ್ತಿದೆ. ಕ್ರಿಸ್ ಮಸ್ ಹಾಗೂ ಹೊಸ ವರ್ಷಾಚರಣೆಗೆ ಬ್ರೇಕ್ ಬಿದ್ದಂತೆ ಆಗಿದೆ. ಪಬ್, ಬಾರ್ ಅಂಡ್ ರೆಸ್ಟೋರೆಂಟ್, ವೈನ್ ಶಾಪ್, ಸಾರಿಗೆ ಸಂಚಾರ ವ್ಯವಸ್ಥೆ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಬಂದ್ ಆಗಲಿವೆ.

ಕೋವಿಡ್ 19 ಹೊಸ ಸ್ವರೂಪದ ವೈರಸ್ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಯುಕೆಯಿಂದ ಬರುವಂತವರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈಗಾಗಲೇ ರಾಜ್ಯಕ್ಕೆ ಯುಕೆಯಿಂದ ಬಂದಿರುವಂತವರನ್ನು ಪತ್ತೆ ಹಚ್ಚಿ ಆರ್ ಟಿ-ಪಿಸಿಆರ್ ಮೂಲಕ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಸಿಎಂ ಹೇಳಿದ್ದಾರೆ.

ರಾಜ್ಯಾಧ್ಯಂತ ರಾತ್ರಿ ಕರ್ಪ್ಯೂ ಸಂದರ್ಭದಲ್ಲಿ ತುರ್ತು ಹೊರತುಪಡಿಸಿ, ಬೇರೆ ಯಾವುದೇ ಚಟುವಟಿಕೆಗೆ ಅವಕಾಶ ಇರುವುದಿಲ್ಲ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು