ಬೆಳಗಾವಿ: ಸುವರ್ಣಸೌಧಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಿದ ಸ್ಪೀಕರ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಳಗಾವಿಯಲ್ಲಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಸಭಾ ಕಲಾಪಕ್ಕೆ ಇಂದು ಮಾಧ್ಯಮಗಳಿಗೆ ನಿರ್ಬಂಧ ಹೇರಿ ,ಮಾರ್ಷಲ್ ಗಳ ಮೂಲಕ ಮಾಧ್ಯಮವನ್ನು ಗೇಟ್ ನಲ್ಲೇ ತಡೆಯುವಂತೆ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಆದೇಶ ಹೊರಡಿಸಿದ್ದಾರೆ ಎಂದು ಸುದ್ದಿಯಾಗಿತ್ತು..

ಕಲಾಪ ಮುಗಿಯಲು ಇನ್ನು ಎರಡು ಮೂರು ದಿವಸಗಳು ಬಾಕಿ ಇದ್ದು, ಇಂದು ಯಾಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದಾರೆ. ಇಂದು ಮತಾಂತರ ನಿಷೇಧ ಕಾಯಿದೆಯ ಕುರಿತಾಗಿ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗುವ ಹಿನ್ನೆಲೆಯಲ್ಲಿ ಸರಕಾರದ ವೈಫಲ್ಯತೆಯನ್ನು ಮರೆಮಾಚಲು ಇಂತಹ ಕ್ರಮ ಕೈಗೊಂಡಿದ್ದಾರೆ ಎಂದು ಮಾಧ್ಯಮ ಪ್ರತಿನಿಧಿಗಳು ಸುವರ್ಣ ಸೌಧದ ಹೊರಗಡೆ ಸ್ಪೀಕರ್ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ಇದನ್ನು ಮನಗೊಂಡ ಸ್ಪೀಕರ್, ಅಲ್ಪ ಸಮಯದ ಬಳಿಕ ಸ್ಥಳಕ್ಕೆ ಆಗಮಿಸಿ ‘ ನಾನು ಮಾಧ್ಯಮಕ್ಕೆ ನಿರ್ಬಂಧ ಹೇರಿಯೇ ಇಲ್ಲ. ನನ್ನ ಅರಿವಿಗೇ ಬಾರದ ಅಚಾತುರ್ಯ ಇದು. ಎಂದಿನಂತೆ ನಿಮ್ಮ ಕಾರ್ಯದಲ್ಲಿ ತೊಡಗಿಕೊಳ್ಳಿ ಎಂದು ಉಲ್ಟಾ ಹೊಡೆದಿದ್ದಾರೆ.

ಸ್ಪೀಕರ್ ಗೆ ಗೊತ್ತೇ ಇಲ್ಲದೆ ಮಾಧ್ಯಮಗಳಿಗೆ ನಿರ್ಬಂಧ ಹೇರಲು ಹೇಗೆ ಸಾಧ್ಯ ಎಂದು ಮಾಧ್ಯಮಗಳು ಎತ್ತಿದ ಪ್ರಶ್ನೆಗೆ ಸ್ಪೀಕರ್ ಕಕ್ಕಾಬಿಕ್ಕಿಯಾದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು