ಮಂಗಳೂರು(05/11/2020): ಪ್ರವಾದಿ ಚರ್ಯೆ ಸಮಕಾಲೀನ ಸಮಸ್ಯೆಗಳಿಗೆ ಪರಿಹಾರ ಎಂಬ ದ್ಯೇಯ ವಾಕ್ಯದೊಂದಿಗೆ ಕರ್ನಾಟಕ ರಾಜ್ಯ ಫೈಝೀಸ್ ಒಕ್ಕೂಟವು ಹಮ್ಮಿಕೊಂಡಿರುವ ಬ್ರಹತ್ ಕ್ಯಾಂಪೇನ್ ನಡೆಯುತ್ತಿದ್ದು, ಇದರ ಭಾಗವಾಗಿ ಮೂಡಬಿದಿರೆಯ ಹೊಸಂಗಡಿಯಲ್ಲಿ ಸಂದೇಶ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಅಸ್ಸೆಯ್ಯದ್ ಅಕ್ರಮ್ ಅಲಿ ತಂಙಲ್ ವಹಿಸಿದ್ದರು. ಕಾರ್ಯಕ್ರಮಲ್ಲಿ ಮುಖ್ಯ ಭಾಷಣ ಮಾಡಿದ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಸದ್ಯದ ಪರಿಸ್ಥಿತಿಯಲ್ಲಿ ಅಕ್ರಮ ಮತ್ತು ಅಮಲು ಮಿತಿಮೀರುತ್ತಿದ್ದು ಇದರ ವಿರುದ್ಧ ಪ್ರತಿಯೊಬ್ಬ ನಾಗರಿಕನು ತನ್ನ ಜವಾಬ್ದಾರಿ ಅರಿತು ಎಚ್ಚೆತ್ತುಕೊಳ್ಳಬೇಕಾಗಿದೆ.ಆ ನಿಟ್ಟಿನಲ್ಲಿ ವಿದ್ವಾಂಸರು ಹೆಚ್ಚು ಗಮನಹರಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಉಸ್ತಾದ್ ಸದಕತುಲ್ಲಾ ಫೈಝಿ ಮಾತನಾಡಿ ಸಮಕಾಲೀನ ಸಮಸ್ಯೆ ಗಳನ್ನು ಪ್ರವಾದಿ ಮುಹಮ್ಮದ್ (ಸ ಅ) ರವರ ಮಾದರಿಯನ್ನು ಸ್ವೀಕರಿಸಿ ಪರಿಹಾರ ಕಂಡುಕೊಳ್ಳಬೇಕೆಂದರು. ಉಸ್ತಾದ್ ಅಶ್ರಫ್ ಫೈಝಿ ಮಿತ್ತಬೈಲು ಕಾರ್ಯಕ್ರಮ ವನ್ನು ಉದ್ಘಾಟಿಸಿ, ಮಾತನಾಡಿದರು.
ಮುಸ್ತಫ ಯಮಾನಿ, ಇಸ್ಮಾಯಿಲ್ ಫೈಝಿ, ರಫೀಕ್ ದಾರಿಮಿ, ನಝೀರ್ ಫೈಝಿ ತೋಡಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಶಾಫೀ ಫೈಝಿ ಖತೀಬ್ ಜುಮಾ ಮಸೀದಿ ಹೊಸಂಗಡಿ ನೇತೃತ್ವದಲ್ಲಿ ಮೌಲಿದ್ ಪಾರಾಯಣ ನಡೆಯಿತು. ಜುಮಾ ಮಸೀದಿ ಹೊಸಂಗಡಿ ಮಸೀದಿಯ ಅಧ್ಯಕ್ಷರು ಮುಹಮ್ಮದ್ ಜವಾದ್ ,ಬದ್ರುದ್ದೀನ್ ಅಬ್ದುಲ್ ಲತೀಫ್ , ಅಹ್ಮದ್ ಹುಸೈನ್, ಮುಹಮ್ಮದ್ ಶಾಫಿ, ಅಶ್ರಫ್ ಮರೋಡಿ, ಫಾರೂಕ್ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ರುವಾರಿ ಉಸ್ತಾದ್ ಇಸ್ಹಾಖ್ ಫೈಝಿ ಪಡ್ಡಂದಡ್ಕ ಸ್ವಾಗತಿಸಿದರು. ಕೆ.ಎಸ್.ಅಬ್ದುಲ್ ಹಮೀದ್ ಶೌಕತ್ ಫೈಝಿ ವಂದಿಸಿದರು.