ಬೆಂಗಳೂರು: ಕರ್ನಾಟಕದಲ್ಲಿ ಶೀಘ್ರದಲ್ಲೇ ದೇಶದ ಪ್ರಪ್ರಥಮ ಸರಕಾರೀ ಆಭರಣ ಮಳಿಗೆ ತಲೆಯೆತ್ತಲಿದೆ.
ಸರಕಾರವೇ ನಿರ್ವಹಣೆ ಮಾಡಲಿರುವ ಮಳಿಗೆಯು ಗ್ರಾಹಕರ ಬೇಡಿಕೆ ಮತ್ತು ಅಭಿರುಚಿಗೆ ತಕ್ಕಂತೆ ವಿವಿಧ ನಮೂನೆಯ ಆಭರಣಗಳನ್ನು ಮಾಡಿಕೊಡಲಿದೆ. ಮೈಸೂರು ಸಿಲ್ಕ್ , ಮೈಸೂರು ಸ್ಯಾಂಡಲ್ ಸೋಪ್, ಕಾವೇರಿ ಕೈ ಮಗ್ಗ ಮಾದರಿಯಲ್ಲಿಯೇ ಸರ್ಕಾರಿ ಅಭರಣಗಳ ಮಳಿಗೆ ತೆರೆಯುವ ಮಹತ್ವದ ನಿರ್ಧಾರವನ್ನು ಇಲಾಖೆಯು ತೆಗೆದುಕೊಂಡಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್ ನಿರಾಣಿ ಅವರು ತಿಳಿಸಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಈ ಆಭರಣ ಮಳಿಗೆಗಳನ್ನು ತೆರೆಯಲಾಗುವುದು. ಮೊದಲು ಬೆಂಗಳೂರು, ಮೈಸೂರು ಹಾಗೂ ರಾಜ್ಯದೊಳಗಿನ ಪ್ರಮುಖ ನಗರಗಳಲ್ಲಿ ಇವು ಕಾರ್ಯಾರಂಭ ಮಾಡಲಿದ್ದು, ಮುಂಬರುವ ದಿನಗಳಲ್ಲಿ ಹೊರರಾಜ್ಯಗಳಲ್ಲೂ ಇವುಗಳನ್ನು ತೆರೆಯುವ ಯೋಜನೆಯಿದೆ ಎಂದಿದ್ದಾರೆ.