ಕಪ್ಪು ಶಿಲೀಂದ್ರ ಸೋಂಕನ್ನು ಅಧಿಕೃತವಾಗಿ ಸೂಚಿತ ಖಾಯಿಲೆ ಎಂದು ಘೋಷಿಸಲಾಗಿದೆ: ಸಚಿವ ಡಾ.ಕೆ.ಸುಧಾಕರ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಕೊರೊನಾ ಸೋಂಕಿನಿಂದ ಗುಣಮುಖರಾಗಿ ನಿಯಂತ್ರಣವಿಲ್ಲದ ಮಧುಮೇಹ ಮತ್ತು ಇತರೆ ರೋಗ ನಿರೋಧಕ ಶಕ್ತಿ ಕುಗ್ಗಿಸುವ ಖಾಯಿಲೆ/ದೇಹಸ್ಥಿತಿ ಇರುವವರಲ್ಲಿ ಕಪ್ಪು ಶಿಲೀಂಧ್ರ ಹೆಚ್ಚಾಗಿ ಕಾಣಿಸುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಕಂಡುಬರುತ್ತಿರುವ ಕಪ್ಪು ಶಿಲೀಂದ್ರ ಸೋಂಕಿನ ನಿವಾರಣೆ ಮತ್ತು ಚಿಕಿತ್ಸೆ ಕುರಿತು ಇಂದು ತಜ್ಞರೊಂದಿಗೆ ಚರ್ಚಿಸಿ ಸಮಾಲೋಚನೆ ನಡೆಸಿದ ಅವರು,
ಡಾ.ಎಚ್.ಎಸ್.ಸತೀಶ್, ಬಿಎಂಸಿ ಇವರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿಲಾಗಿದ್ದು ಸೋಂಕಿನ ಕಾರಣ & ಚಿಕಿತ್ಸೆ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ಅತಿಯಾದ ಸ್ಟಿರಾಯ್ಡ್ ಬಳಕೆ ಮತ್ತು ಕಲುಷಿತ ವೆಂಟಿಲೇಟರ್ ಇತ್ಯಾದಿ ಉಪಕರಣಗಳಿಂದ ಈ ಸೋಂಕು ಬರುವ ಸಾಧ್ಯತೆಯಿದೆ. ಕಪ್ಪು ಶಿಲೀಂದ್ರ ಸೋಂಕನ್ನು ಈಗ ಅಧಿಕೃತವಾಗಿ ಸೂಚಿತ ಖಾಯಿಲೆ ಎಂದು ಘೋಷಿಸಲಾಗಿದ್ದು ಎಲ್ಲ ಆಸ್ಪತ್ರೆಗಳು ಪ್ರಕರಣಗಳನ್ನು ವರದಿ ಮಾಡಬೇಕು ಎಂದಿದ್ದಾರೆ.

ಇದರ ಚಿಕಿತ್ಸೆಗೆ ಬಳಸುವ Amphotericin B ಎಂಬ ಔಷಧದ 20,000 ವೈಯಲ್ಸ್ ಗಳನ್ನ ತರಿಸಲು ನಿರ್ಧರಿಸಿದ್ದು, ಆಕ್ಸಿಜನ್ ಕಲುಷಿತಗೊಳ್ಳುತ್ತಿರುವ ಮೂಲಗಳನ್ನು ಅರಿಯಲು ಕ್ರಮ ಕೈಗೊಳ್ಳಲಾಗುವುದು. ಇದರ ಚಿಕಿತ್ಸೆಗೆ ಎಂಎಂಸಿ,ಮೈಸೂರು, ಸಿಮ್ಸ್, ಶಿವಮೊಗ್ಗ, ಜಿಮ್ಸ್,ಕಲಬುರ್ಗಿ, ಕಿಮ್ಸ್ ಹುಬ್ಬಳ್ಳಿ, ಕೆಎಂಸಿ, ಮಣಿಪಾಲ, ವೆನ್ಲಾಕ್ ಆಸ್ಪತ್ರೆ, ಮಂಗಳೂರು ಇವುಗಳನ್ನು ಪ್ರಾದೇಶಿಕ ಕೇಂದ್ರಗಳಾಗಿ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸಾರ್ವಜನಿಕರು ಇದರ ಬಗ್ಗೆ ಆತಂಕ ಪಡದೆ, ಕೊರೊನಾದಿಂದ ಗುಣಮುಖರಾದ ನಂತರ ಮುನ್ನೆಚ್ಚರಿಕೆ ವಹಿಸಬೇಕೆಂದು ಆರೋಗ್ಯ ಸಚಿವರು ಜನತೆಗೆ ಕೋರಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು