ಜಿ-23 ನಾಯಕರು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿರಲಿಲ್ಲ: ಕಾಂಗ್ರೆಸ್ ಸೋಲಿನ ಕಚ್ಚಾಟದಲ್ಲಿ ಸಿಬಲ್

kapil sibel
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(19-11-2020): ಬಿಹಾರದಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಬಳಿಕ ಪಕ್ಷದೊಳಗಿನ ಕಾಂಗ್ರೆಸ್ ಹಿರಿಯ ನಾಯಕರ ಕಚ್ಚಾಟ ತಾರಕಕ್ಕೇರಿದೆ.

ಕಪಿಲ್ ಸಿಬಲ್ ಈ ಹಿಂದೆ ಕಾಂಗ್ರೆಸ್ಸಿಗರು ಆತ್ಮಾವಲೋಕನ ಮಾಡಬೇಕಿದೆ ಎಂಬ ಹೇಳಿಕೆಗೆ ಪಶ್ಚಿಮ ಬಂಗಾಳಧ ಕಾಂಗ್ರೆಸ್ ನಾಯಕ ಅಧೀರ್ ಚೌಧರಿ ನಿನ್ನೆ ಹೇಳಿಕೆ ನೀಡಿ ಕಪಿಲ್ ಸಿಬಲ್ ನ್ನು ನಾವು ಚುನಾವಣಾ ಪ್ರಚಾರದ ವೇಳೆ ಬಿಹಾರ, ಗುಜರಾತ್, ಯುಪಿಯಲ್ಲಿ ನೋಡಿಲ್ಲ ಎಂದು ಹೇಳಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಬಲ್, ಚೌಧರಿ ಅವರ ನಿಲುವು ದುರದೃಷ್ಟಕರ. ಏಕೆಂದರೆ ಹೆಚ್ಚಿನ ಜಿ -23 ನಾಯಕರು ಬಿಹಾರದ ಪ್ರಚಾರಕರ ಪಟ್ಟಿಯಲ್ಲಿರಲಿಲ್ಲ. ಇದು ಅಧೀರ್ ಮತ್ತು ಇತರ ನಾಯಕರಿಗೆ ತಿಳಿದಿಲ್ಲ. ಪ್ರಚಾರಕರಲ್ಲದವರಿಗೆ ಪ್ರಚಾರಕ್ಕೆ ಹೋಗಲು ಸಾಧ್ಯವಿಲ್ಲ. ಪಕ್ಷವು ಅಧಿಕೃತವಾಗಿ ಹೇಳುತ್ತದೆ ಎಂದು ಹೇಳಿದ್ದಾರೆ.

ಕೆಲವು ನಾಯಕರು ಕಾಂಗ್ರೆಸ್ ಅವರಿಗೆ ಸರಿಯಾದ ಪಕ್ಷವಲ್ಲ ಎಂದು ಭಾವಿಸಿದರೆ, ಅವರು ಹೊಸ ಪಕ್ಷವನ್ನು ಸ್ಥಾಪಿಸಬಹುದು ಅಥವಾ ಪ್ರಗತಿಪರವೆಂದು ಭಾವಿಸುವ ಮತ್ತು ಅವರ ಹಿತಾಸಕ್ತಿಗೆ ಅನುಗುಣವಾಗಿ ಬೇರೆ ಯಾವುದೇ ಪಕ್ಷಕ್ಕೆ ಸೇರಬಹುದು ಎಂದು ಸಂಸದರು ಹೇಳಿದ್ದರು.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು