“ಕಣ್ಣೀರು” ಹೇಡಿಯ ಪ್ರಮುಖ ಅಸ್ತ್ರ: ಪ್ರಧಾನಿ ಮೋದಿಗೆ ರಾಜ್ಯ ಕಾಂಗ್ರೆಸ್  ಟೀಕೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು : ಮಾನ್ಯ ನರೇಂದ್ರ ಮೋದಿಯವರೇ, ಜನತೆಗೆ ಬೇಕಿರುವುದು ನಿಮ್ಮ ಕಣ್ಣೀರಲ್ಲ.
ಆಕ್ಸಿಜನ್, ಲಸಿಕೆ, ವೈದ್ಯಕೀಯ ವ್ಯವಸ್ಥೆ, ಚಿಕಿತ್ಸೆ, ಆರ್ಥಿಕ ನೆರವು.ಇದ್ಯಾವುದನ್ನೂ ನೀಡದೆ ಎರಡು ಹನಿ ಕಣ್ಣೀರ ನಾಟಕದಿಂದ ಜನಾಕ್ರೋಶ ತಣಿಸುವ ತಂತ್ರ ಬಿಡಿ ಎಂದು ರಾಜ್ಯ ಕಾಂಗ್ರೆಸ್ ಟೀಕಿಸಿದೆ.

ಈ ಕುರಿತು ಟ್ವೀಟ್ ಮಾಡಿದ ಕಾಂಗ್ರೆಸ್,
ಎದುರಿಗಿದ್ದ ಕ್ಯಾಮೆರಾ ಹಾಗೂ ಟೆಲಿಪ್ರಾಂಪ್ಟರ್‌ ನೋಡಿಕೊಂಡು ಕಣ್ಣೀರು ಸುರಿಸುವುದು ಅದ್ಬುತ ನಟನಾ ಕೌಶಲ್ಯ! “ಕಣ್ಣೀರು” ಹೇಡಿಯ ಪ್ರಮುಖ ಅಸ್ತ್ರ!! ಎಂದು ಕಾಂಗ್ರೆಸ್ ಪ್ರಧಾನಿ ಮೋದಿಗೆ ತಿರುಗೇಟು ನೀಡಿದೆ.

ದೇಶದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಇನ್ನೆಷ್ಟು ಜನರಿಗೆ ಬಲಿ ಪಡೆಯುವುದು, ಈ ನೋವನ್ನು ತಡೆದುಕೊಳ್ಳಲು ಸಾಧ್ಯ ಆಗ್ತಿಲ್ಲ ಎಂದಿದ್ದಾರೆ.
ಕೋವಿಡ್ ವಿರುದ್ಧ ಹೋರಾಡುತ್ತಿರುವ ಉತ್ತರ ಪ್ರದೇಶದ ವಾರಾಣಸಿಯ ವೈದ್ಯರ ಜೊತೆಗೆ ಸಂವಾದ ನಡೆಸುವ ಸಂದರ್ಭದಲ್ಲಿ ನರೇಂದ್ರ ಮೋದಿ ಭಾವುಕರಾಗಿದ್ದರು.

ಸಾಂಕ್ರಾಮಿಕ ರೋಗದ ಎರಡನೇ ತರಂಗದಲ್ಲಿ ಪ್ರಾಣ ಕಳೆದುಕೊಂಡ ಜನರಿಗೆ ಪಿಎಂ ಮೋದಿ ಗೌರವ ಸಲ್ಲಿಸಿದರು. ಈ ವೈರಸ್ ನಮ್ಮ ಪ್ರೀತಿಪಾತ್ರರನ್ನು ನಮ್ಮಿಂದ ಕಿತ್ತುಕೊಂಡಿದೆ. ವೈದ್ಯರೊಂದಿಗೆ ಸಂವಾದದ ವೇಳೆ ಮೋದಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಜ್ಯ ಕಾಂಗ್ರೆಸ್ ಇದು ನಾಟಕೀಯ ಅಸ್ತ್ರ ಎಂದು ಅಪಹಾಸ್ಯ ಮಾಡಿದೆ.

ಕರೋನಾ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿ ಛಿಮಾರಿ ಹಾಕಿಸಿಕೊಳ್ಳುತ್ತಿರುವ ನಕಲಿ ‘ವಿಶ್ವನಾಯಕ’ನ ಹೆಸರು ಉಳಿಸಲು #Toolkit ಎಂಬ ಅಡ್ಡದಾರಿ ಹಿಡಿದಿದ್ದ @BJP4India ಪಕ್ಷದ ಸಂಬಿತ್ ಪಾತ್ರಾ ಎಂಬ ಟ್ವೀಟ್‌ನ್ನು ‘ದಿಕ್ಕುತಪ್ಪಿಸುವುದಾಗಿದೆ’ ಎಂದು ಟ್ವಿಟರ್ ಗುರುತಿಸಿದೆ. ಕಾಂಗ್ರೆಸ್ ತೇಜೋವಧೆಯ ಪ್ರಯತ್ನಕ್ಕೆ ಸೋಲಾಗಿದೆ ಎಂದು ಕಾಂಗ್ರೆಸ್ ಆರೋಪಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು