ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವ್ಯವಹಾರ ಶಂಕೆ| ಒಂದು ವರ್ಷ ಕಳೆದರೂ ಲೆಕ್ಕಕೊಟ್ಟಿಲ್ಲ!

kananda sammelana
Share on facebook
Share on twitter
Share on linkedin
Share on whatsapp
Share on telegram
Share on email
Share on print

ಕಲಬುರ್ಗಿ(12-02-2021): ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದು ಒಂದು ವರ್ಷವಾದರೂ ಈವೆರೆಗೆ ಖರ್ಚು ವೆಚ್ಚಗಳ ಬಗ್ಗೆ ಲೆಕ್ಕಾಚಾರವನ್ನು ಬಹಿರಂಗಪಡಿಸಲಾಗಿಲ್ಲ. ಇದರಿಂದಾಗಿ ಒಟ್ಟಾರೆ ಕಾರ್ಯಕ್ರಮದ ವೆಚ್ಚದಲ್ಲಿ ಅವ್ಯವಹಾರದ ಬಗ್ಗೆ ಆರೋಪ ಕೇಳಿ ಬರುತ್ತಿದೆ.

ಕಲಬುರ್ಗಿಯಲ್ಲಿ ಕಳೆದ ವರ್ಷ 5, 6 ಹಾಗೂ 7ಕ್ಕೆ  85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಸಮ್ಮೇಳನಕ್ಕೆ ಎಷ್ಟು ಹಣ ಸಂಗ್ರಹವಾಗಿದೆ ಮತ್ತು ಎಷ್ಟು ವೆಚ್ಚವಾಗಿದೆ ಎಂಬುವುದನ್ನು ಒಂದು ವರ್ಷವಾದರೂ ಬಹಿರಂಗಪಡಿಸಲಾಗಿಲ್ಲ.

ಕಲ್ಯಾಣ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ ನಾಲವಾರಕರ್ ಅವರು ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಆರೋಪಿಸಿದ್ದಾರೆ.

ಕಾರ್ಯಕ್ರಮಕ್ಕೆ ಸರಕಾರಿ ನೌಕರರ ಸಂಘ, ರಾಜ್ಯ ಸರಕಾರ ಸೇರಿ ವಿವಿಧ ಮೂಲಗಳಿಂದ ದೇಣಿಗೆ ಬಂದಿದೆ. ಈ ಬಗ್ಗೆ ಸಾರ್ವಜನಿಕ ಮಾಹಿತಿಯನ್ನು ನೀಡಿಲ್ಲ.

 

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು