ಹೊಸಪೇಟೆ(03/10/2020): ಇಲ್ಲಿಯ ನಗರ ಸಭೆಯು ವಿವಿಧ ಮಳಿಗೆಗಳ ಮೇಲಿನ ಕನ್ನಡೇತರ ನಾಮಫಲಕಗಳಿಗೆ ಕಪ್ಪು ಮಸಿ ಬಳಿಯುವ ಪ್ರಕ್ರಿಯೆಗೆ ನಾಂದಿ ಹಾಡಿದೆ.
ಇಂದು ಸುಮಾರು 40 ಮಳಿಗೆಗಳ ನಾಮಫಲಕಗಳಿಗೆ ನಗರಸಭೆ ಸಿಬ್ಬಂದಿ ಮಸಿ ಬಳಿದರು. ನ. 2ರ ಒಳಗೆ ಕನ್ನಡದಲ್ಲಿ ನಾಮಫಲಕ ಬರೆಸುವಂತೆ ನಗರಸಭೆಯ ಪೌರಾಯುಕ್ತೆ ಪಿ. ಜಯಲಕ್ಷ್ಮಿ ಅವರು ಇತ್ತೀಚೆಗೆ ಕನ್ನಡೇತರ ನಾಮಫಲಕ ಹೊಂದಿದ ಮಳಿಗೆ ಮಾಲೀಕರಿಗೆ ನೋಟಿಸ್ ಕೊಟ್ಟಿದ್ದರು.
ನೋಟಿಸ್ ಕೊಟ್ಟರೂ ಕನ್ನಡ ನಾಮಫಲಕ ಅಳವಡಿಸದ ಕಾರಣ ಮಸಿ ಬಳಿಯಲಾಗುತ್ತಿದೆ.
ಈ ವೇಳೆ ಆರೋಗ್ಯ ಇನ್ಸ್ಪೆಕ್ಟರ್ ವೆಂಕಟೇಶ ಹವಲ್ದಾರ, ಸಿಬ್ಬಂದಿ ಸತ್ಯನಾರಾಯಣ ಶರ್ಮಾ, ಮಾರುತಿ, ರಾಮಾಂಜನೇಯ, ನಾಗರಾಜ, ವೆಂಕಟೇಶ, ತಿಮ್ಮಯ್ಯ, ಬಾಬು ಇದ್ದರು.