ಕನಿಷ್ಠ ಜಿಡಿಪಿ, ಗರಿಷ್ಠ ನಿರುದ್ಯೋಗ’ : ಮೋದಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ದೇಶದ ಜಿಡಿಪಿ ಮತ್ತು ಗರಿಷ್ಠ ಪ್ರಮಾಣದ ನಿರುದ್ಯೋಗದ ವ್ಯತಿರಿಕ್ತ ಅಂಕಿ ಅಂಶಗಳು ಹಾಗೂ ಶಿಲೀಂಧ್ರಕ್ಕೆ ಚಿಕಿತ್ಸೆ ನೀಡುವ ಔಷಧಿಗಳ ಕೊರತೆಯನ್ನು ಎತ್ತಿಹಿಡಿದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ಕನಿಷ್ಠ ಜಿಡಿಪಿ, ಗರಿಷ್ಠ ನಿರುದ್ಯೋಗ” ಪ್ರಧಾನ ಮಂತ್ರಿಗಳ ಅವಮಾನಕರ ಅಂಶವಾಗಿದೆ ಎಂದು ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಇದರೊಂದಿಗೆ 2014 ರಿಂದ ಯುವಕರಲ್ಲಿ ನಿರುದ್ಯೋಗ ಹೆಚ್ಚಳವನ್ನು ತೋರಿಸುವ ಗ್ರಾಫ್ ಒಂದನ್ನು ಟ್ವೀಟರ್ ನಲ್ಲಿ ಹಾಕಿದ್ದಾರೆ.

ಪ್ರಸ್ತುತ ದೇಶದಲ್ಲಿ ಕೊರೋನಾ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದೆ ಎನ್ನುವಷ್ಟರಲ್ಲಿ ‘ಬ್ಲ್ಯಾಕ್​ ಫಂಗಸ್’​ ಮತ್ತೊಂದು ಮಹಾಮಾರಿ ಹೆಚ್ಚಾಗಲಾರಂಭಿಸಿದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಟ್ವಿಟ್ಟರ್​ನಲ್ಲಿ ಟ್ವೀಟ್​ ಮಾಡಿರುವ ರಾಹುಲ್​ ಗಾಂಧಿ ಕಪ್ಪು ಶಿಲೀಂಧ್ರ ಸಾಂಕ್ರಾಮಿಕದ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದಿದ್ದಾರೆ.

1. Amphotericin B ಔಷಧ ಕೊರತೆಗೆ ಏನು ಮಾಡಲಾಗುತ್ತಿದೆ.

2. ಈ ಔಷಧವನ್ನು ರೋಗಿಗಳಿಗೆ ನೀಡುವ ವಿಧಾನ ಯಾವುದು?

3. ಚಿಕಿತ್ಸೆ ನೀಡಬೇಕಾದ ಸಮಯದಲ್ಲಿ ಮೋದಿ ಸರ್ಕಾರ ಜನರಿಗೆ ಇನ್ನಷ್ಟು ತೊಂದರೆ ಗೊಳಗಾಗುವಂತೆ ಏಕೆ ನಡೆದುಕೊಳ್ಳುತ್ತಿದೆ? ಎಂದು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.

ಕೋವಿಡ್ ಎರಡನೇ ಅಲೆಯ ಭೀತಿಯಿಂದ ಹೊರಬರುವ ಮುನ್ನವೇ ಜನತೆಗೆ ಕಪ್ಪು ಶಿಲೀಂಧ್ರ ರೋಗದ ಆತಂಕ ಹೆಚ್ಚಾಗಿದೆ. ಇದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಯಾವ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಿದೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು