ಮುಂಬೈ(17-10-2020): ತಮ್ಮ ಪ್ರಚೋದನಕಾರಿ ಟ್ವೀಟ್ಗಳ ಮೂಲಕ ಕೋಮು ಉದ್ವೇಗವನ್ನು ಸೃಷ್ಟಿಸಲು ಯತ್ನಿಸಿದ ಆರೋಪದ ಮೇಲೆ ಬಾಲಿವುಡ್ ನಟಿ ಕಂಗನಾ ಮತ್ತು ಅವರ ಸಹೋದರಿ ರಂಗೋಲಿ ಚಾಂಡೆಲ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮುಂಬೈ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ.
ಕಾಸ್ಟಿಂಗ್ ನಿರ್ದೇಶಕ ಸಾಹಿಲ್ ಅಶ್ರಫಾಲಿ ಸಯ್ಯದ್ ಅವರು ನೀಡಿದ ದೂರಿನ ಆಧಾರದ ಮೇಲೆ ಬಾಂದ್ರಾ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಜಯದೇವ್ ವೈ ಗುಲೆ ಅವರು ಈ ಆದೇಶವನ್ನು ನೀಡಿದ್ದಾರೆ.
ಐಪಿಸಿ ಸೆಕ್ಷನ್ಗಳು 153 ಎ (ದ್ವೇಷವನ್ನು ಉತ್ತೇಜಿಸುವುದು), 295 ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ದುರುದ್ದೇಶಪೂರಿತ ಕೃತ್ಯಗಳು), ನಟಿ ಮತ್ತು ಆಕೆಯ ಸಹೋದರಿ ವಿರುದ್ಧ 124 ಎ (ದೇಶದ್ರೋಹ) ಅಡಿಯಲ್ಲಿ ಎಫ್ಐಆರ್ ನೋಂದಾಯಿಸಲು ನ್ಯಾಯಾಲಯದ ನಿರ್ದೇಶನವನ್ನು ಕೋರಿ ಸಾಹಿಲ್ ದೂರು ದಾಖಲಿಸಿದ್ದರು.
ಕಳೆದ ಎರಡು ತಿಂಗಳುಗಳಿಂದ ಕಂಗನಾ ತನ್ನ ಟ್ವೀಟ್ಗಳು ಮತ್ತು ಟೆಲಿವಿಷನ್ ಸಂದರ್ಶನಗಳ ಮೂಲಕ ಬಾಲಿವುಡ್ನ್ನು “ಸ್ವಜನಪಕ್ಷಪಾತದ ಹಬ್”, “ಫೇವರಿಟಿಸಮ್” ಇತ್ಯಾದಿ ಎಂದು ದೂಷಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.