ಕಳ್ಳತನ ಮಾಡಿ ಸಿಕ್ಕಿಬಿದ್ದ ಪೊಲೀಸರು| ಪಕ್ಕಾ ಸಿಸಿಬಿ ಶೈಲಿಯಲ್ಲೇ ನಡೆದಿತ್ತು ಅಸಲಿ-ನಕಲಿ ಪೊಲೀಸರ ರೈಡ್!

crime news
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು (22-11-2020): ಪೊಲೀಸರೇ ಕಳ್ಳರ ಜೊತೆ ಸೇರಿ ಕಳ್ಳತನಕ್ಕೆ ಇಳಿದು ಸಿಕ್ಕಿಬಿದ್ದಿರುವ ಘಟನೆ ಹಲಸೂರು ಗೇಟ್  ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು ನಗರ್ತಪೇಟೆಯ ಅಣ್ಣಯ್ಯ ಬೀದಿಯಲ್ಲಿ ಚಿನ್ನದ ಅಂಗಡಿಗೆ ನ.11ರಂದು ಏಕಾಏಕಿ ಪೊಲೀಸರು ದಾಳಿ ಮಾಡಿದ್ದರು. ಲೈಸನ್ಸ್ ಇಲ್ಲ, ಕದ್ದ ಚಿನ್ನ ಖರೀದಿ ಮಾಡುತ್ತಿದ್ದಿ ಎಂದು ಅಂಗಡಿ ಮಾಲಕ ಕಾರ್ತಿಕ್ ನನ್ನು ಬೆದರಿಸಿ 9 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳ್ಳರು ಪೊಲೀಸರ ಜೊತೆ ಸೇರಿ ದೋಚಿದ್ದರು.

ದಾಳಿ ಬಳಿಕ ಅಂಗಡಿ ಮಾಲಕ ಕಾರ್ತಿಕ್, ಪರಿಚಿತ ಪೊಲೀಸರ ಮೂಲಕ ದಾಳಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಈ ವೇಳೆ ಕಳ್ಳರ ಕೃತ್ಯ ಎನ್ನುವುದು ಬಹಿರಂಗವಾಗಿದೆ.

ಘಟನೆಯ ಸಿಸಿಟಿವಿ ದೃಶ್ಯ ಸೆರೆಯಾಗಿದೆ. ತಕ್ಷಣ ಕಾರ್ತಿಕ್ ಪೊಲೀಸರಿಗೆ ದೂರು ನೀಡಿದ್ದಾನೆ. ಈ ವೇಳೆ 7 ಜನ ಕಳ್ಳರ ಜೊತೆ ಇಬ್ಬರು ಪೊಲೀಸರು ಕೃತ್ಯದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೇದೆ ಅಶೋಕ್ ನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಇನ್ನೋರ್ವ ಪೊಲೀಸ್ ಚೌಡೇಗೌಡ ತಲೆಮರೆಸಿಕೊಂಡಿದ್ದಾನೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು