ಅನುಮಾನಾಸ್ಪದ ರೀತಿಯಲ್ಲಿ ಮುಸ್ಲಿಂ ವ್ಯಕ್ತಿಯ ಮೃತದೇಹ ಪತ್ತೆ| ಮೃತನ ಮೇಲೆ  ದನ ಕಳ್ಳತನಕ್ಕೆ ಯತ್ನಿಸಿದ್ದ ಕೇಸ್ ದಾಖಲು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕಲಬುರ್ಗಿ (05-02-2021): ಸಿರನೂರ ಗ್ರಾಮದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮುಸ್ಲಿಂ ವ್ಯಕ್ತಿಯೋರ್ವರು ಮೃತಪಟ್ಟಿದ್ದಾರೆ.

ಮುಂಬಯಿ‌ ಮೂಲದ ಮಹಮದ್‌ ಫರಿಯಾದ್‌ ಶೇಖ್‌ ಖುರೇಷಿ (40) ಅನುಮಾನಾಸ್ಪದವಾಗಿ ಮೃತಪಟ್ಟ ವ್ಯಕ್ತಿ.

ಶ್ರೀನಿವಾಸ ಗುತ್ತೇದಾರ ಎಂಬಾತನ ಜಮೀನಿನಲ್ಲಿ ಮೃತದೇಹ ಪತ್ತೆಯಾಗಿದೆ. ಮೃತ ಖುರೇಷಿ ದನಕಳ್ಳತನಕ್ಕೆ ಪ್ರಯತ್ನಿಸಿದಾಗ ನಮಗೆ ಎಚ್ಚರವಾಗಿದೆ . ಈ ವೇಳೆ ನಮ್ಮ ಮೇಲೆ ಖುರೇಷಿ ಕಲ್ಲು ಎಸೆದಿದ್ದಾನೆ. ಆಗ ಗ್ರಾಮಸ್ಥರು ಸೇರಿ ಆತನ ಕಡೆ ಕಲ್ಲು ಎಸೆದಿದ್ದಾರೆ. ಬಳಿಕ ಆತ ನಾಪತ್ತೆಯಾಗಿದ್ದ. ಬೆಳಿಗ್ಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ   ಸತೀಶ್ ಕುಮಾರ್ ಹೇಳಿದ್ದಾರೆ.

ಮೃತ ಖುರೇಷಿ ವಿರುದ್ಧ ಕಳ್ಳತನದ ಕೇಸ್ ದಾಖಲಾಗಿದೆ. ಘಟನೆ ಬಗ್ಗೆ ಸಂಶಯ ವ್ಯಕ್ತಪಡಿಸಿದ ಕುರೇಷಿ ಮಗ ಕೊಲೆ ಪ್ರಕರಣವನ್ನು ಫರಹತಾಬಾದ್‌ ಠಾಣೆಯಲ್ಲಿ ದಾಖಲಿಸಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು