ಛತ್ತೀಸಗಢ (22-01 -2021): ಕಬಡ್ಡಿ ಆಟ ಆಡುವಾಗ ಕಬಡ್ಡಿ ಪ್ರೇಮಿ ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಛತ್ತೀಸಗಢ ಧಾಮ್ತಾರಿ ಜಿಲ್ಲೆಯ ಗೋಜಿ ಎಂಬ ಗ್ರಾಮದಲ್ಲಿ ನಡೆದಿದೆ.
ಕೋಕಾಡಿ ಗ್ರಾಮದ ನರೇಂದ್ರ ಸಾಹು ಮೃತ ಯುವಕ.ಈತ ರಾತ್ರಿ ನಡೆದ ಕಬಡ್ಡಿ ಪಂದ್ಯಾಟದಲ್ಲಿ ರೈಡರ್ ಆಗಿ ಎದುರಾಳಿಗಳ ಕೋರ್ಟ್ಗೆ ನರೇಂದ್ರ ಸಾಹು ಕಾಲಿರಿಸಿದ್ದ, ಬಳಿಕ ಎತನನ್ನು ಎದುರಾಳಿ ತಂಡವು ಹಿಡಿದಿದೆ. ಈ ವೇಳೆ ಪ್ರಜ್ಞೆ ತಪ್ಪಿ ಆತ ಬಿದ್ದಿದ್ದಾನೆ.
ತಕ್ಷಣ ಗಾಬರಿಗೊಂಡು ಸಾಹುನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಈ ವೇಳೆಗೆ ಆತ ಮೃತಪಟ್ಟಿದ್ದಾನೆ.