ಕಾಂಗ್ರೆಸ್ ಬಿಟ್ಟರೂ ಸಿಂಧಿಯಾಗೆ ಕೈ ಮೇಲೆ ಪ್ರೀತಿ| ವಿಡಿಯೋ ವೀಕ್ಷಿಸಿ   

jyothiradithya sindiya
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಧ್ಯಪ್ರದೇಶ (02-11-2020): ಕಮಲನಾಥ್ ಸರಕಾರವನ್ನು ಉರುಳಿಸಿ ಬಿಜೆಪಿಗೆ ಸೇರಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಇನ್ನೂ ಕಾಂಗ್ರೆಸ್ ಮೇಲಿನ‌ ತನ್ನ‌ ಪ್ರೀತಿಯನ್ನು ಬಿಟ್ಟಿಲ್ವ ಎಂದು ನೆಟ್ಟಿಗರು ಕೇಳಿದ್ದಾರೆ.

ನಿನ್ನೆ ಚುನಾವಣಾ ಪ್ರಚಾರ ಸಭೆಯಲ್ಲಿ , ಬಿಜೆಪಿ ವೇದಿಕೆಯಲ್ಲಿ ಬಿಜೆಪಿ ಪರವಾಗಿ ಮಾತನಾಡಿ, ಕೊನೆಗೆ ಕಾಂಗ್ರೆಸ್ ನ ಕೈ ಚಿಹ್ನೆಗೆ ಮತ ಹಾಕಿ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಈ ಬಗ್ಗೆ  ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ವಿಡಿಯೋ ಹಂಚಿಕೊಂಡಿದೆ.  ಬಿಜೆಪಿ ಅಭ್ಯರ್ಥಿ ಇಮರ್ತಿ ದೇವಿಯವರ ಪರ ಗ್ವಾಲಿಯರ್ ನ ದಬ್ರಾ ಪಟ್ಟಣದಲ್ಲಿ ಪ್ರಚಾರ ನಡೆಸುತ್ತಾ ಭಾಷಣದ ಕೊನೆಗೆ ಜನರಲ್ಲಿ ನವೆಂಬರ್ 3ರ ಉಪ ಚುನಾವಣೆ ದಿನ ನಿಮ್ಮ ಮತವನ್ನು ಕೈಗೆ ಒತ್ತಿ ಎಂದು ಕೇಳಿಕೊಂಡರು.

ತಕ್ಷಣವೇ ತಮ್ಮ ತಪ್ಪನ್ನು ತಿದ್ದಿಕೊಂಡ ಸಿಂಧಿಯಾ, ನಿಮ್ಮ ಮತವನ್ನು ಕಮಲದ ಗುರುತಿಗೆ ಹಾಕಿ ಎಂದು ಕೇಳಿಕೊಂಡರು.

ಈ ವಿಡಿಯೊವನ್ನು ರಾಜ್ಯ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದು,  ಸಿಂಧಿಯಾರವರೇ, ಮಧ್ಯ ಪ್ರದೇಶದ ಜನರು ನ. 3 ರಂದು ಕೈಯ ಗುರುತಿಗೆ ಮತ ಹಾಕುತ್ತಾರೆ ಎಂದು ನಿಮಗೆ ಖಂಡಿತಾ ಭರವಸೆ ಕೊಡುತ್ತಾರೆ ಎಂದು ಬರೆದುಕೊಂಡಿದೆ.

ಇನ್ನು ಜ್ಯೋತಿರಾದಿತ್ಯ ಸಿಂಧಿಯಾ ವೀಡಿಯೋ  ವೈರಲ್ ಆಗುತ್ತಿದ್ದಂತೆ ಜನರು ಸಿಂಧಿಯಾ ವಿರುದ್ಧ ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು