ಆರ್ ಜೆಡಿ ನಾಯಕ `ಜಂಗಲ್ ರಾಜ್ ನ ಯುವರಾಜ’; ಮೋದಿ ವ್ಯಂಗ್ಯ

modi
Share on facebook
Share on twitter
Share on linkedin
Share on whatsapp
Share on telegram
Share on email
Share on print

ಪಾಟ್ನಾ(28/10/2020); ದಿನದಿಂದ ದಿನಕ್ಕೆ ರಂಗೇರುತ್ತಿದೆ ಬಿಹಾರ ವಿಧಾನ ಸಭಾ ಚುನಾವಣೆ.  ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಂದ ಮತ ಯಾಚನೆಯ ಭರಾಟೆ ಜೋರಾಗಿದೆ. ಇಂದು  ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರ 2 ನೇ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಮಾತಿನುದ್ದಕ್ಕೂ ಅವರು ಬಿಹಾರದ ಮುಖ್ಯ ಪಕ್ಷವಾಗಿರುವ ಆರ್ ಜೆಡಿಯನ್ನು ಟಾರ್ಗೆಟ್ ಮಾಡಿರುವ ಅವರು ನಿತೀಶ್ ಕುಮಾರ್ ಅವರ ಪ್ರಮುಖ ಎದುರಾಳಿ ಹಾಗೂ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಅವರನ್ನು ಜಂಗಲ್ ರಾಜ್ ನ ಯುವರಾಜ ಎಂದು ಛೇಡಿಸಿದ್ದಾರೆ.

” ಮತದಾರರು ಜಂಗಲ್ ರಾಜ್ ನ ಯುವರಾಜನ ಬಗ್ಗೆ ಎಚ್ಚರವಾಗಿರಿ. ಅವರ ಬಳಿ ಅಪಹರಣದ ಕಾಪಿರೈಟ್ ಇದೆ. ಕೋವಿಡ್-19 ಸಂದರ್ಭದಲ್ಲಿ ಜಂಗಲ್ ರಾಜ್ ಮರುಕಳಿಸಿದರೆ ರಾಜ್ಯಕ್ಕೆ ಎರಡೆರಡು ಸಂಕಷ್ಟ ಎದುರಾಗುತ್ತದೆ” ಎಂದು ಮೋದಿ ವ್ಯಂಗ್ಯವಾಡಿದ್ದಾರೆ.  ಈ ಚುನಾವಣೆ ಬಿಹಾರವನ್ನು ಕತ್ತಲ ಕೂಪದಿಂದ ಹೊರತಂದವರನ್ನು ಮರು ಆಯ್ಕೆ ಮಾಡುವುದಕ್ಕೆ ಸಿಕ್ಕಿರುವ ಅವಕಾಶ ಎಂದು ಹೇಳಿದ್ದಾರೆ.

” ಜಂಗಲ್ ರಾಜ್ ನ ಯುವರಾಜನಿಂದ ಏನಾದರೂ ನಿರೀಕ್ಷಿಸುತ್ತೀರಾ? ಅವರ ಟ್ರ್ಯಾಕ್ ರೆಕಾರ್ಡ್ ನಿಮಗೇ ತಿಳಿದಿದೆ. ಈ ಆಧಾರದಲ್ಲಿ ಜಂಗಲ್ ರಾಜ್ ನ ಯುವರಾಜನನ್ನು ಮೌಲ್ಯಮಾಪನ ಮಾಡಿ” ಎಂದು ಅವರು ಆರ್ ಜೆಡಿ ನಾಯಕರ ವಿರುದ್ಧ ಕಿಡಿಕಾರಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು