ಜೂನ್ 14 ರವರೆಗೆ ಲಾಕ್ಡೌನ್ ವಿಸ್ತರಣೆ : 500 ಕೋಟಿಯ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ

Share on facebook
Share on twitter
Share on linkedin
Share on whatsapp
Share on telegram
Share on email
Share on print

 

ಬೆಂಗಳೂರು : ಜೂನ್ 7ರಂದು ಅಂತ್ಯವಾಗುವ ಲಾಕ್ ಡೌನ್ ಇನ್ನೂ ಒಂದು ವಾರ ಅಂದ್ರೆ ಜೂನ್ 14ರ ವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಸಿಎಂ ಬಿ. ಎಸ್. ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ರಾಜ್ಯದಲ್ಲಿ ಕೊರೊನಾ ಕೇಸ್ ಪ್ರಕರಣಗಳು ಸ್ವಲ್ಪ ಮಟ್ಟಿಗೆ ಇಳಿಮುಖ ಆಗಿದೆ. ಆದ್ರೆ ಸಾವಿನ ಪ್ರಮಾಣ ಇನ್ನು ಹಾಗೆ ಇದೆ. ಜೂನ್ 7 ರಿಂದ ಅನ್ ಲಾಕ್ ಮಾಡಿದರೆ ಮತ್ತೆ ಸೋಂಕು ಹೆಚ್ಚಾಗಬಹುದು ಎಂದು ತಜ್ಞರ ಸಮಿತಿ ವರದಿ ನೀಡಿತ್ತು. ಒಂದು ವಾರ ಲಾಕ್ ಡೌನ್ ವಿಸ್ತರಣೆ ಮಾಡಲೇಬೇಕು ಎಂದು ಬಹುತೇಕ ಸಚಿವರು, ವಿರೋಧ ಪಕ್ಷದ ನಾಯಕರ ನಿಲುವು ಆಗಿತ್ತು. ಈ ಹಿನ್ನಲೆಯಲ್ಲಿ ಒಂದು ವಾರ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರಿಸಲಾಗುವದು ಎಂದು ಇಂದು ಸಿಎಂ ಹೇಳಿದ್ದಾರೆ.

ಇಂದು ಸಂಜೆ 5ಗಂಟೆಗೆ ಸಿಎಂ ಸುದ್ದಿಗೋಷ್ಠಿ ನಡೆಸಿದ ಸಿಎಂ ಯಡಿಯೂರಪ್ಪ ಲಾಕ್ ಡೌನ್ ವಿಸ್ತರಣೆ ಜೊತೆಗೆ ಕೆಲವೊಂದು ಕಾರ್ಮಿಕ ವರ್ಗಗಳಿಗೆ, ಖಾಸಗಿ ಶಿಕ್ಷಕರಿಗೆ ಅಸಂಘಟಿತ ಕಾರ್ಮಿಕರಿಗೆ 500 ಕೋಟಿ ಮೊತ್ತದ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

ರಾಜ್ಯ ಸರಕಾರ ಪ್ರಕಟಿಸಿದ ಆರ್ಥಿಕ ಪ್ಯಾಕೇಜ್ ವಿವರ ಹೀಗಿದೆ:

• ಚಲನಚಿತ್ರ ಮತ್ತು ದೂರದರ್ಶನ ದಲ್ಲಿ ತೊಡಗಿರುವ ಅಸಂಘಟಿತ ಕಾರ್ಮಿಕರಿಗೆ 3 ಸಾವಿರ

• ಪವರ್ ಲೂಮ್ ನೌಕರರಿಗೆ 3000 ರೂ.

• ಆಶಾ ಕಾರ್ಯಕರ್ತಯರಿಗೆ 3000 ರೂ.

• ಆರ್ಚಕರು ಮತ್ತು ಅಡುಗೆ ಕೆಲಸಗಾರರಿಗೆ
ಸಿ ಗ್ರೂಪ್ ನೌಕರರಿಗೆ 3 ಸಾವಿರ ರೂ.

• ಮೀನುಗಾರರಿಗೆ 3 ಸಾವಿರ ರೂ.

• ಸಿನಿಮಾ ರಂಗದವರಿಗೆ 3 ಸಾವಿರ ರೂ.

• ಅಂಗನವಾಡಿ ಸಹಾಯಕರಿಗೆ ತಲಾ 2
ಸಾವಿರ ರೂಪಾಯಿ

• ಮಸೀದಿಯ ರೇಷಿಮಾ,ಪೌಜಿನ್ ಗೆ ತಲಾ
3 ಸಾವಿರ ರೂ.

• ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರಿಗೆ
5000 ರೂ. ಪರಿಹಾರ

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು