ಜೂನ್ ಒಂದರಂದೇ ದೇಶಕ್ಕೆ ಮಾನ್ಸೂನ್ ಆಗಮನ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಜೂನ್ ಒಂದರಂದೇ ದೇಶಕ್ಕೆ ಮಾನ್ಸೂನ್ ಆಗಮಿಸಲಿದೆ ಎಂದು ಭೂ ವಿಜ್ಞಾನ ಸಚಿವಾಲಯ ಕಾರ್ಯದರ್ಶಿ ಎಂ. ರಾಜೀವನ್ ತಿಳಿಸಿದ್ದಾರೆ.

ಜೂನ್ ತಿಂಗಳಿನಿಂದ ಸೆಪ್ಟಂಬರ್ ತಿಂಗಳ ವರೆಗೆ ಎಪ್ಪತ್ತು ಶೇಕಡಾ ಮಳೆಯಾಗಲಿದ್ದು, ಕೃಷಿಗೆ ಅನುಕೂಲಕರ ವಾತಾವಣ ಸೃಷ್ಠಿಯಾಗಲಿದೆ. ಮೇ ಹದಿನೈದರಂದು ಬಾರಿಯ ಮಳೆಗಾಲದ ಬಗ್ಗೆ ವಿಸ್ತೃತವಾದ ವರದಿಯನ್ನು ಪ್ರಕಟಿಸಲಿದೆಯೆಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಜೂನ್ ಒಂದರಂದು ನೈಋತ್ಯ ಮುಂಗಾರು ಕೇರಳದಲ್ಲಿ ಮಳೆ ತರುವ ಮೂಲಕ ದೇಶವನ್ನು ಪ್ರವೇಶಿಸಲಿದೆ. ಇದರಿಂದಾಗಿ  ವರ್ಷ ಸಕಾಲದಲ್ಲಿ ಮಳೆ ಬೀಳಲಿದೆ ಎಂದು ಇಲಾಖೆ ತಿಳಿಸಿದೆ

ಈಗ ಮುಂಗಾರು ಪೂರ್ವ ಮಳೆ:

ಪ್ರಸ್ತುತ ರಾಜ್ಯದಲ್ಲಿ ಕೆಲವು ಕಡೆ ಸಿಡಿಲು, ಮಿಂಚು ಸಹಿತ ಮಳೆಯಾಗುತ್ತಿದೆ. ಇದನ್ನು ಮುಂಗಾರು ಪೂರ್ವ ಮಳೆ ಎಂದು ಹವಾಮಾನ ಇಲಾಖೆಯು ಗುರುತಿಸಿದೆ. ಕಳೆದ ಹತ್ತು ದಿನಗಳಿಂದ ಬೀದರ್, ಧಾರವಾಡ, ಬಾಗಲಕೋಟೆ, ಬಾದಾಮಿಮುಂತಾದ ಕಡೆಗಳಲ್ಲಿ ಮುಂಗಾರು ಪೂರ್ವ ಮಳೆಯು ಸುರಿಯುತ್ತಿದೆ.

ಇದು ಮೇ ಹತ್ತರ ವರೆಗೂ ಮುಂದುವರಿಯಲಿದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ  ಹೆಚ್ಚು ಮಳೆ ತರಲಿದೆ. ಜೊತೆಗೆ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಗಳಲ್ಲೂ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂಗಾರು ಪೂರ್ವ ಮಳೆಯು ಭೂಮಿಯನ್ನು ಹದಗೊಳಿಸಿದ್ದು, ರೈತರ ಪಾಲಿಗೆ ವರದಾನವಾಗಿ ಪರಿಣಮಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು