ಜುಲೈನಲ್ಲಿ ನಡೆಯಬೇಕಿದ್ದ ಸಿಇಟಿ ಪರೀಕ್ಷೆ ಮುಂದೂಡಿಕೆ, ಆಗಸ್ಟ್ ನಲ್ಲಿ ಮರು ನಿಗದಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು : ಜುಲೈ 7 ರಿಂದ ನಡೆಯಬೇಕಿದ್ದ
ಸಿಇಟಿ ಪರೀಕ್ಷೆಯನ್ನು ಕೊರೋನಾ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ಮುಂದೂಡಲಾಗಿದೆ.

ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, 2021ನೇ ಸಾಲಿನ ವಾರ್ಷಿಕ ದ್ವಿತೀಯ ದ್ವಿತೀಯ ಪಿಯು ಪರೀಕ್ಷೆಗಳನ್ನು ಮುಂದೂಡಲ್ಪಟ್ಟಿದ್ದರಿಂದ ಹಾಗೂ ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿರುವುದನ್ನು ಪರಿಗಣಿಸಿ, ದಿನಾಂಕ 01-07-2021 ಮತ್ತು 08-07-2021ರಂದು ನಡೆಸಲು ನಿಗದಿಪಡಿಸಿದ್ದ 2021ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಮತ್ತು 09-07-2021ರಂದು ನಡೆಸಬೇಕಾಗಿದ್ದ ಕನ್ನಡ ಭಾಷಾ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದೆ.

ಪ್ರಸ್ತುತ ಸಿಇಟಿ 2021ರ ಪರೀಕ್ಷೆ ದಿನಾಂಕ 28-08-2021 ಮತ್ತು 29-08-2021ರಂದು ಮತ್ತು ಕನ್ನಡ ಭಾಷಾ ಪರೀಕ್ಷೆಯನ್ನು ದಿನಾಂಕ 30-08-2021ರಂದು ನಡೆಸಲಾಗುವುದು ಹಾಗೂ ಶೀಘ್ರದಲ್ಲಿಯೇ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದು (ಕೆಇಎ)ಪ್ರಕಟಣೆಯಲ್ಲಿ ತಿಳಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು