ಮಹಿಳಾ ಸಬ್ ಇನ್ಸ್ ಪೆಕ್ಟರ್ ಪತ್ರಕರ್ತನನ್ನು ಕೊಲೆ ಮಾಡಿ ರೈಲ್ವೇ ಟ್ರಾಕ್ ನಲ್ಲಿ ಎಸೆದ್ರು! ಯುವ ಪತ್ರಕರ್ತನ ಕೊಲೆ-ಕ್ರೈಂ ರಿಪೋರ್ಟ್

crime
Share on facebook
Share on twitter
Share on linkedin
Share on whatsapp
Share on telegram
Share on email
Share on print

ಉನ್ನಾವೋ(14-11-2020): ಸ್ಥಳೀಯ ಹಿಂದಿ ದಿನಪತ್ರಿಕೆಯ 22 ವರ್ಷದ ಪತ್ರಕರ್ತ ರೈಲ್ವೆ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಹಿಂದೆ ಸಬ್ ಇನ್ಸ್ ಪೆಕ್ಟರ್ ಸುನೀತಾ ಚೌರಾಸಿಯಾ ಇದ್ದಾರೆ ಎಂದು ಶಂಕಿಸಲಾಗಿದೆ ಮತ್ತು ಅವರಿಬ್ಬರು ಸ್ನೇಹಿತರೆಂದು ಹೇಳಲಾಗಿದೆ. ಅವರ ಕುಟುಂಬಸ್ಥರ ಗಂಭೀರ ಆರೋಪದ ಬಳಿಕ  ಪೊಲೀಸರು ಸಬ್ ಇನ್ಸ್ ಪೆಕ್ಟರ್ ಸುನೀತಾ ಚೌರಾಸಿಯಾ, ಕಾನ್‌ಸ್ಟೆಬಲ್ ಅಮರ್ ಸಿಂಗ್ ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸರ್ಕಲ್ ಅಧಿಕಾರಿ ಗೌರವ್ ತ್ರಿಪಾಠಿ ತಿಳಿಸಿದ್ದಾರೆ.

ಗುರುವಾರ ಸಂಜೆ ಸದರ್ ಕೊಟ್ವಾಲಿ ಪ್ರದೇಶದಲ್ಲಿ ರೈಲ್ವೆ ಹಳಿ ಮೇಲೆ ಆತನನ್ನು ಕೊಂದು ಶವವನ್ನು ಎಸೆಯಲಾಗಿದೆ ಎಂದು ಪತ್ರಕರ್ತ ಸೂರಜ್ ಪಾಂಡೆ ಅವರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ಸೂರಜ್ ಮತ್ತು ಸುನೀತಾ ಸ್ನೇಹಿತರಾಗಿದ್ದರು ಮತ್ತು ಈ ಕಾರಣದಿಂದಾಗಿ ನವೆಂಬರ್ 11 ರಂದು ಕಾನ್‌ಸ್ಟೆಬಲ್ ಫೋನ್ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತ ಪತ್ರಕರ್ತನ ತಾಯಿ ಲಕ್ಷ್ಮಿ ಪಾಂಡೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಗುರುವಾರ ಬೆಳಿಗ್ಗೆ ಸೂರಜ್ ಅವರು ಮನೆಯಿಂದ ಹೊರಡುವ ಮುನ್ನ ಫೋನ್ ಕರೆ ಸ್ವೀಕರಿಸಿದ್ದಾರೆ ಎಂದು ಲಕ್ಷ್ಮಿ ಹೇಳಿದ್ದಾರೆ. ಆ ನಂತರ ಆತನ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಮತ್ತು ಒಂದು ದಿನದ ನಂತರ ಅವರ ಶವ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು