ಪ್ರತಿಬಿಂಬಾ ಲೈವ್‌ನ ಪತ್ರಕರ್ತ ತೌಫಿಕ್ವಿದ್ದೀನ್ & ಇಕ್ಬಾಲ್ ಬಂಧನ

himanth biswa
Share on facebook
Share on twitter
Share on linkedin
Share on whatsapp
Share on telegram
Share on email
Share on print

ಗುವಾಹಟಿ(17-02-2021): ಅಸ್ಸಾಂ ಸಚಿವ ಹಿಮಂತ ಬಿಸ್ವಾ ಶರ್ಮಾ ಅವರು ಮಗಳ ಜೊತೆಗಿರುವ ಫೋಟೋವನ್ನು ಹಂಚಿಕೊಂಡ ಇಬ್ಬರು ಪತ್ರಕರ್ತರನ್ನು ಬುಧವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ತನಿಖೆ ನಡೆಸಲು ಸ್ಥಳೀಯ ಸುದ್ದಿ ವೆಬ್‌ಸೈಟ್ ಪ್ರತಿಬಿಂಬಾ ಲೈವ್‌ನ ಪ್ರಧಾನ ಸಂಪಾದಕ ತೌಫಿಕ್ವಿದ್ದೀನ್ ಅಹ್ಮದ್ ಮತ್ತು ಅದರ ಸುದ್ದಿ ಸಂಪಾದಕ ಇಕ್ಬಾಲ್ ಅವರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ.

ಪೋಕ್ಸೊ ಕಾಯ್ದೆಯ ಕಠಿಣ ನಿಬಂಧನೆಗಳ ಅಡಿಯಲ್ಲಿ ಇಂತಹ ಎಲ್ಲ ಪ್ರಯತ್ನಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದು ಸಚಿವ ಬಿಸ್ವಾ ಹೇಳಿದ್ದಾರೆ.ಪತ್ರಕರ್ತರ ವಿರುದ್ಧ ಐಪಿಸಿ ಸೆಕ್ಷನ್ 509 (ಯಾವುದೇ ಮಹಿಳೆಯ ನಮ್ರತೆಯನ್ನು ಅವಮಾನಿಸುವ ಉದ್ದೇಶದಿಂದ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯ ಸೆಕ್ಷನ್ 14 ಮತ್ತು 21 ರ ಅಡಿಯಲ್ಲಿ ಪತ್ರಕರ್ತರ ವಿರುದ್ಧ ಕೇಸ್ ದಾಖಲಾಗಿದೆ. ಡಿಸ್ಪುರ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ.

ಸಚಿವರು ತಮ್ಮ ಮಗಳನ್ನು ತಬ್ಬಿಕೊಳ್ಳುವ ಫೋಟೋವನ್ನು ವೆಬ್‌ಸೈಟ್ ಹಂಚಿಕೊಂಡಿದ್ದು, ಅದರ ನಂತರ ಅದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫೋಟೋದಲ್ಲಿರುವ ಹುಡುಗಿ ಸಚಿವರ ಮಗಳು ಎಂದು ಉಲ್ಲೇಖಿಸದಿದ್ದಕ್ಕಾಗಿ ವೆಬ್‌ಸೈಟ್ ನಂತರ ಕ್ಷಮೆಯಾಚಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು