ಟ್ರಂಪ್ ಯುಗಾಂತ್ಯ: ಕೊಲ್ಲಿ ದೇಶಗಳಲ್ಲಿ ಹೊಸ ಅಲೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ವಾಷಿಂಗ್ಟನ್ ಡಿಸಿ(7-11-2020): ತೀವ್ರ ಜಾಗತಿಕ ಕುತೂಹಲದ ಕೇಂದ್ರ ಬಿಂದುವಾಗಿದ್ದ, ಅಮೇರಿಕಾದ ಐತಿಹಾಸಿಕ ಚುನಾವಣೆಯ ಬಳಿಕ ಟ್ರಂಪ್ ಯುಗವು ಅಂತ್ಯಗೊಂಡು, ಅಮೇರಿಕಾದ ಹೊಸ ಅಧ್ಯಕ್ಷರಾಗಿ ಬೈಡನ್ ಚುನಾಯಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗಲ್ಫ್ ದೇಶಗಳಲ್ಲಿ ಹೊಸ ಅಲೆಯೊಂದು ಸೃಷ್ಟಿಯಾಗಿರುವುದೆಂದು ನಂಬಲಾಗಿದೆ.

ಡೊನಾಲ್ಡ್ ಟ್ರಂಪ್ ತೀವ್ರ ಬಲಪಂಥೀಯತೆಗೆ ಬಹಿರಂಗ ಬೆಂಬಲ ವ್ಯಕ್ತಪಡಿಸುತ್ತಿದ್ದರು ಮತ್ತು ಇಸ್ರೇಲ್ ಹಿತಾಸಕ್ತಿಗಳನ್ನು ಸಂರಕ್ಷಿಸುವ ನಡೆ ಅವರದಾಗಿತ್ತು. ಇಸ್ರೇಲ್ ರಾಜಧಾನಿಯಾಗಿ ಜೆರುಸ್ಲೇಮನ್ನು ಅಂಗೀಕರಿಸಿದ್ದೇ ಅಲ್ಲದೇ, ಇಸ್ರೇಲೀ ಅತಿಕ್ರಮಣದ ಪರವಾಗಿದ್ದರು. ಇದು ಹಲವು ಮುಸ್ಲಿಂ ದೇಶಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಜೊತೆಗೆ ಟ್ರಂಪ್ ಅವಧಿಯಲ್ಲಿ ಕೆಲವು ಮುಸ್ಲಿಂ ದೇಶಗಳ ಪ್ರಜೆಗಳು ಅಮೇರಿಕಾ ಪ್ರವೇಶಿಸುವುದಕ್ಕೆ ನಿಷೇಧವನ್ನೂ ಹೇರಲಾಗಿತ್ತು.

ಹೊಸ ಅಧ್ಯಕ್ಷರಾಗಿ ಆಯ್ಕೆಯಾದ ಜೊ ಬೈಡನ್ ಉದಾರವಾದಿ ಧೋರಣೆಯನ್ನು ಹೊಂದಿದವರೆಂದು ನಿರೀಕ್ಷಿಸಲಾಗಿದೆ. ಗಲ್ಫ್ ದೇಶಗಳ ನಡುವಿನ ಒಡಕಿಗೆ ಕಾರಣವಾಗಿದ್ದರೆನ್ನಲಾದ ಟ್ರಂಪ್ ನಡೆಗೆ ವ್ಯತಿರಿಕ್ತವಾಗಿ ಬೈಡನ್ ಗಲ್ಫ್ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವರೆಂಬ ಆಶಾಭಾವ ಹಲವು ರಾಜಕೀಯ ತಜ್ಞರು ವ್ಯಕ್ತಪಡಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು