ವಾಷಿಂಗ್ಟನ್ (26-11-2020): ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ತನ್ನ ಕುಟುಂಬವನ್ನು ನೆನೆದು ಕಣ್ಣೀರಿಟ್ಟ ಪ್ರಸಂಗ ನಡೆದಿದೆ.
ವಂದನಾ ಭಾಷಣದಲ್ಲಿ ಮಾತನಾಡಿದ ವಿಶ್ವದ ದೊಡ್ಡಣ್ಣ ಜೋ ಬಿಡೆನ್, ತಮ್ಮವರನ್ನು ಕಳೆದುಕೊಂಡಾಗ ಆಗುವ ನೋವು, ದು:ಖದ ಅನುಭವ ನನಗೆ ಚೆನ್ನಾಗಿ ತಿಳಿದಿದೆ ಎಂದು ಕೋವಿಡ್ ಸೋಂಕಿನಿಂದ ಮೃತಪಟ್ಟವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಜೋ ಬಿಡೆನ್ ಹೇಳಿದ್ದಾರೆ.
ವೈಯಕ್ತಿಕ ಜೀವನದಲ್ಲಿ ಜೋ ಬಿಡೆನ್ ನಿಜಕ್ಕೂ ನಿರ್ಭಾಗ್ಯವಂತ. ಯಾಕೆಂದರೆ ಬಿಡೆನ್ ಪತ್ನಿ ಮತ್ತು ಪುತ್ರಿ 1972ರಲ್ಲಿ ಕ್ರಿಸ್ ಮಸ್ ಸಂದರ್ಭದಲ್ಲಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಇನ್ನು ಇದ್ದ ಓರ್ವ ಪುತ್ರ 2015ರಲ್ಲಿ ಬ್ರೈನ್ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ.ಇವರನ್ನು ನೆನಪಿಸಿಕೊಂಡ ಜೋ ಬಿಡೆನ್ ಭಾಷಣದಲ್ಲಿ ಭಾವುಕರಾಗಿದ್ದಾರೆ.
ಅಮೆರಿಕಾದಲ್ಲಿ ಕೋವಿಡ್ ಗೆ 2,62,000ಕ್ಕೂ ಅಧಿಕ ಜನರು ಸಾವಿಗೀಡಾಗಿರುವುದರಿಂದ ಜೋ ಬಿಡೆನ್ ಮೃತರ ಕುಟುಂಬಸ್ಥರಿಗೆ ಸಾಂತ್ವ ಹೇಳಿದ್ದಾರೆ. ನಾವು ನಮ್ಮ ನಡುವಿನ ಯುದ್ದಬಿಟ್ಟು ನಾವು ವೈರಸ್ನೊಂದಿಗೆ ಯುದ್ಧ ಮಾಡಬೇಕಿದೆ ಎಂದು ಹೇಳಿದ್ದಾರೆ.