ಯುಎಇ: ಉದ್ಯೋಗ ವೀಸಾಗೆ ಭಾಗಶಃ ಅನುಮತಿ

uae
Share on facebook
Share on twitter
Share on linkedin
Share on whatsapp
Share on telegram
Share on email
Share on print

ಯುಎಇ (06-10-2020): ಉದ್ಯೋಗ ವಿಸಾ ಮೂಲಕ ಯುಎಇಗೆ ತೆರಳಲು ಅನುಮತಿ ದೊರೆತಿದೆ. ಕೋರೋನಾ ಬಳಿಕ ಎಲ್ಲಾ ರೀತಿಯ ವೀಸಾ ಚಟುವಟಿಕೆಗಳನ್ನು ನಿಲ್ಲಿಸಲಾಗಿತ್ತು. ಕೊರೋನಾ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದ ಬಳಿಕ ಟೂರಿಸ್ಟ್, ವಿಸಿಟ್ ವೀಸಾಗಳಿಗೆ ಅನುಮತಿಸಲಾಗಿತ್ತು. ಇದೀಗ ಉದ್ಯೋಗ ವೀಸಾ ಕೂಡಾ ಈ ವ್ಯಾಪ್ತಿಯಲ್ಲಿ ಬಂದಿದೆ.

ಸದ್ಯ ಮನೆಕೆಲಸ, ಸರಕಾರಿ, ಅರೆಸರಕಾರಿ ಉದ್ಯೋಗ ವೀಸಾಗಳಿಗಷ್ಟೇ ಇದು ಅನ್ವಯವಾಗಿದ್ದು, ಶೀಘ್ರದಲ್ಲೇ ಎಲ್ಲಾ ವಿಧದ ಉದ್ಯೋಗ ವೀಸಾ ಚಟುವಟಿಕೆಗಳೂ ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಸುದ್ದಿಯಿಂದಾಗಿ ಅಸಂಖ್ಯ ಅನಿವಾಸಿಗಳು ನಿರಾಳತೆಯ ನಿಟ್ಟುಸಿರು ಬಿಡುವಂತಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು