ಗುಜರಾತ್(24-01-2021): ಜಿಯೋ ಟ್ರೇಡ್ಮಾರ್ಕ್ ಬಳಸಿ ಗೋಧಿ ಹಿಟ್ಟನ್ನು ಮಾರಾಟ ಮಾಡಿದ್ದಕ್ಕಾಗಿ ನಾಲ್ಕು ಜನರನ್ನು ಗುಜರಾತ್ನ ಸೂರತ್ನಲ್ಲಿ ಬಂಧಿಸಲಾಗಿದೆ. ಈ ಮೂಲಕ ಜಿಯೋ ಗೋಧಿ ಹಿಟ್ಟು ಲಭ್ಯವಿದೆ ಎಂಬ ವಿಚಾರದಲ್ಲಿನ ಅಸಲಿಯತ್ತು ಬಹಿರಂಗವಾಗಿದೆ. ಇದು ಜಿಯೋ ಕಂಪೆನಿಯ ಪ್ರೊಡೆಕ್ಟ್ ಅಲ್ಲ ಎನ್ನುವುದು ಬಹಿರಂಗವಾಗಿದೆ.
ಜಿಯೋ ಕಂಪೆನಿ ವಕ್ತಾರರ ದೂರಿನ ನಂತರ ನಾಲ್ವರನ್ನು ಬಂಧಿಸಲಾಗಿದೆ ಎಂದು ಗುಜರಾತ್ ಪೊಲೀಸರು ತಿಳಿಸಿದ್ದಾರೆ. ಜಿಯೋ ಟ್ರೇಡ್ಮಾರ್ಕ್ ಬಳಸಿ ಸಂಪೂರ್ಣ ಗೋಧಿ ಹಿಟ್ಟನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿಸಿ ರಿಲಯನ್ಸ್ ಜಿಯೋ ಕಂಪನಿ ದೂರು ದಾಖಲಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮ್ ಕೃಷ್ಣ ಟ್ರೇಡೆಲಿಂಕ್ ಎಂಬ ಕಂಪನಿಯು ಜಿಯೋ ಟ್ರೇಡ್ಮಾರ್ಕ್ ಬಳಸಿ ಗೋಧಿ ಹಿಟ್ಟನ್ನು ಮಾರಾಟ ಮಾಡುತ್ತಿದೆ ಎಂದು ತಿಳಿಸಿ ರಿಲಯನ್ಸ್ ಜಿಯೋ ಸೂರತ್ನ ಸಚಿನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಸೂರತ್ (ವಲಯ 3) ಉಪ ಪೊಲೀಸ್ ಆಯುಕ್ತ ವಿಧಿ ಚೌಧರಿ ತಿಳಿಸಿದ್ದಾರೆ.
ದೂರಿನ ಆಧಾರದ ಮೇಲೆ ಟ್ರೇಡ್ಮಾರ್ಕ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.