ನವದೆಹಲಿ (31-12-2020): ರಿಲಯನ್ಸ್ ಜಿಯೊ ಗ್ರಾಹಕರಿಗೆ ಭರ್ಜರಿ ಆಫರನ್ನು ನೀಡಿದ್ದು, ನಾಳೆಯಿಂದ ಎಲ್ಲಾ ನೆಟ್ ವರ್ಕ್ ಗಳಿಗೆ ಉಚಿತ ಕರೆಯನ್ನು ಜಿಯೋ ಘೋಷಿಸಿದೆ.
2021ರ ಜನವರಿ 1ರಿಂದ ಹೊಸ ಜಿಯೋ ನೆಟ್ವರ್ಕ್ ನೀತಿ ಜಾರಿಗೆ ಬರಲಿದ್ದು, ಈ ಮೂಲಕ ಎಲ್ಲ ದೇಶೀಯ ಧ್ವನಿ ಕರೆಗಳ ಮೇಲಿನ ಶುಲ್ಕವನ್ನು ರದ್ದುಪಡಿಸಿದೆ.
ಈ ಹಿಂದಿನಿಂದಲೂ ಜಿಯೋದಿಂದ- ಜಿಯೋ ನೆಟ್ವರ್ಕ್ಗಳಿಗೆ ಎಲ್ಲ ಕರೆಗಳು ಉಚಿತವಾಗಿ ಸಿಗುತ್ತಿದ್ದು, 2021ರ ಜನವರಿ 1ರಿಂದ ಜಿಯೋದಿಂದ ಇತರೆ ನೆಟ್ವರ್ಕ್ಗಳಿಗೆ (ಆಫ್-ನೆಟ್) ಮಾಡುವ ಕರೆಗಳಿಗೂ ಶುಲ್ಕ ವಿಧಿಸುವುದಿಲ್ಲ.
ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಯೋ ಸಾಮೂಹಿಕ ಬಹಿಷ್ಕಾರ ಸೇರಿದಂತೆ ಅಂಬಾಣಿಯ ರಿಲೆಯನ್ಸ್ ಗೆ ಬಹಿಷ್ಕಾರವನ್ನು ದೇಶದಾದ್ಯಂತ ಮಾಡಲಾಗಿತ್ತು. ಇದು ಜಿಯೋಗೆ ದೊಡ್ಡ ಆಘಾತ ಉಂಟು ಮಾಡಿರುವ ಸಾಧ್ಯತೆ ಇದ್ದು, ಇದೀಗ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಹೊಸ ತಂತ್ರಕ್ಕೆ ಜಿಯೋ ಮುಂದಾಗಿದೆ.