ಜಾರ್ಖಾಂಡ್(29-09-2020): ಜಾರ್ಖಂಡ್ ನಲ್ಲಿ ಗೋಮಾಂಸ ಸೇವಿಸಿದ್ದಾರೆಂದು 6 ಜನರಿಗೆ ಥಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ.
ಸೆಪ್ಟೆಂಬರ್ 16 ರಂದು ಸದರ್ ಪೊಲೀಸ್ ಠಾಣೆ ಪ್ರದೇಶದ ಭೆಡಿಕುದಾರ್ ಗ್ರಾಮದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಒಟ್ಟು ಐದು ಜನರನ್ನು ಈವರೆಗೆ ಬಂಧಿಸಲಾಗಿದೆ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ರಾಜ್ಕಿಶೋರ್ ತಿಳಿಸಿದ್ದಾರೆ.
ಮಹಿಳಾ ಸಂತ್ರಸ್ತೆ ನೀಡಿದ ಪೊಲೀಸ್ ದೂರಿನ ಪ್ರಕಾರ, ಆರೋಪಿಗಳು ಸೆಪ್ಟೆಂಬರ್ 16 ರಂದು ಆಕೆಯ ಮನೆಗೆ ಬಂದು ಗಂಡನನ್ನು ಥಳಿಸಿದ್ದರು ಮತ್ತು ಮನೆಯಲ್ಲಿ ದರೋಡೆಯನ್ನು ಮಾಡಿದ್ದರು.
ಅವರ ನೆರೆಹೊರೆಯವರು ಕೇಳಿದಾಗ, ಹಳ್ಳಿಯಲ್ಲಿ ಮೆರವಣಿಗೆ ನಡೆಸುವ ಮೊದಲು ಅವರೆಲ್ಲರೂ ಗೋಮಾಂಸ ಸೇವಿಸಿದ್ದಾರೆ ಎಂದು ಆರೋಪಿಗಳು ಹೇಳಿದ್ದಾರೆ.ಉಳಿದ ನಾಲ್ವರು ಆರೋಪಿಗಳನ್ನು ಬಂಧಿಸಲು ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತರನ್ನು ‘ಜೈ ಶ್ರೀ ರಾಮ್’ ಎಂದು ಜಪಿಸಲು ಒತ್ತಾಯಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ಪೊಲೀಸರು ತಳ್ಳಿಹಾಕಿದ್ದಾರೆ.