ವಾಷಿಂಗ್ಟನ್(08-11-2020): ಅಮೆರಿಕಾದಲ್ಲಿ ಬಿಡೆನ್ ನೇತೃತ್ವದ ಸರ್ಕಾರ 5 ಲಕ್ಷ ಅನಿವಾಸಿ ಭಾರತೀಯರಿಗೆ ಅಮೆರಿಕ ನಾಗರಿಕತ್ವ ನೀಡಲು ಸಿದ್ದತೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಅಮೆರಿಕದಲ್ಲಿ ವಿವಿಧ ದೇಶಗಳ ಸುಮಾರು 11 ಲಕ್ಷ ವಲಸಿಗರಿದ್ದು, ಈ ಪೈಕಿ ಭಾರತದ ಮೂಲದ 5ಲಕ್ಷ ವಲಸಿಗರಿದ್ದಾರೆ. ಬಿಡೆನ್ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಪೌರತ್ವ ನೀಡುವ ಬಗ್ಗೆ ಮಂಡನೆಯನ್ನು ಮಾಡಿದ್ದರು. ವಲಸಿಗರು ಅಮೆರಿಕಕ್ಕೆ ಎಷ್ಟು ಮುಖ್ಯ, ಅವರಿಂದ ದೇಶಕ್ಕೆ ಎಂಥ ಬಲ ಬರುತ್ತದೆ ಎಂಬುದನ್ನು ಭಾರತೀಯ ಅಮೆರಿಕನ ಸಮುದಾಯವನ್ನು ಉಲ್ಲೇಖಿಸಲಾಗಿತ್ತು.
ಭಾರತೀಯರೂ ಸೇರಿದಂತೆ ಸುಮಾರು 1.1 ಕೋಟಿ ದಾಖಲೆರಹಿತ ವಲಸಿಗರಿಗೆ ಪೌರತ್ವ ನೀಡಲು ಸಾಧ್ಯವಾಗುವಂತೆ ವಲಸಿಗ ಶಾಸನದಲ್ಲಿ ಸುಧಾರಣೆ ತರುವ ಕೆಲಸವನ್ನು ಬೈಡನ್ ಕೂಡಲೇ ಪ್ರಾರಂಭಿಸುತ್ತಾರೆ ಎಂದು ಡೆಮಾಕ್ರೆಟಿಕ್ ಪಕ್ಷ ತಿಳಿಸಿದೆ.