ನವದೆಹಲಿ: ಪಿಂಚಣಿ ಸ್ವೀಕರಿಸಲು ಬೇಕಾಗಿರುವ ಜೀವನ ಪ್ರಮಾಣ ಪತ್ರ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವೇನೂ ಅಲ್ಲ ಎಂದು ಕೇಂದ್ರ ಸರಕಾರ ತಿಳಿಸಿದೆ.
ಅದೇ ವೇಳೆ ಯಾರಾದರೂ ಸ್ವಯಂ ಪ್ರೇರಿತರಾಗಿ ಆಧಾರ್ ಕಾರ್ಡ್ ಸಲ್ಲಿಸಿ, ಜೀವನ ಪ್ರಮಾಣ ಪತ್ರ ಪಡೆಯಬಹುದು ಎಂದೂ ತಿಳಿಸಿದೆ. ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ತನ್ನ ಅಧಿಸೂಚನೆಯಲ್ಲಿ ಈ ವಿಚಾರವನ್ನು ಸ್ಪಷ್ಠಪಡಿಸಿದೆ.
ಜೊತೆಗೆ ಸರಕಾರೀ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ತಮ್ಮ ಬಯೋ ಮೆಟ್ರಿಕ್ ಹಾಜರಾತಿ ವ್ಯವಸ್ಥೆಯಲ್ಲಿ ಸಹಾ ಆಧಾರ್ ಕಡ್ಡಾಯವಿರುವುದಿಲ್ಲವೆಂಬ ಅಧಿಸೂಚನೆಯೂ ಬಂದಿದೆ.
ಸಚಿವಾಲಯದ ಅಧೀನದಲ್ಲಿರುವ ಯುಐಡಿಎಐ ಸುತ್ತೋಲೆಗಳಲ್ಲೂ ಈ ಮಾರ್ಗಸೂಚಿಗಳನ್ನು ಕಾಣಬಹುದೆಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.