ತುಮಕೂರು(01-11-2020): ಜೆಡಿಎಸ್ ಬಹಿರಂಗ ಸಮಾವೇಶ ಶಿರಾ ಕ್ಷೇತ್ರದ ‘ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ’ ಕುಸಿದು ಬಿದ್ದಿರುವ ಘಟನೆ ನಡೆದಿದೆ.
ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅಮ್ಮಾಜಮ್ಮ,ನನ್ನ ಪತಿಯ ಅಕಾಲಿಕ ನಿಧನದಿಂದಾಗಿ ನೋವು ತಂದಿದೆ. ಸೆರಗೊಡ್ಡಿ ಬೇಡುತ್ತೇನೆ ನನಗೆ ಮತನೀಡಿ ಗೆಲ್ಲಿಸಿ. ಕ್ಷೇತ್ರದ ಅಭಿವೃದ್ಧಿಯನ್ನು ತಾವು ಮಾಡುವುದಾಗಿ ಹೇಳಿದ್ದಾರೆ. ಈ ಬಳಿಕ ದೇವೇಗೌಡರು ಮಾತನಾಡುತ್ತಿದ್ದ ವೇಳೆ ಕುಸಿದು ಬಿದ್ದಿದ್ದಾರೆ.
ಬಹಿರಂಗ ಸಮಾವೇಶದಲ್ಲಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಸೇರಿದಂತೆ ಹಲವು ಜೆಡಿಎಸ್ ನಾಯಕರು ಉಪಸ್ಥಿತರಿದ್ದರು.