ಬೆಂಗಳೂರು(19-12-2020): ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳಲಿದೆಯೆಂದು ಬಸವರಾಜ ಹೊರಟ್ಟಿ ಹೇಳಿದ್ದಾರೆ. ಹೊರಟ್ಟಿಯ ಈ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.
ಜೆಡಿಎಸ್ ಬಿಜೆಪಿ ಜೊತೆಗೆ ವಿಲೀನ ಆಗುವುದು ಅಲ್ಲ; ಬದಲು ಗಟ್ಟಿ ಮೈತ್ರಿ ಮಾಡಲಿದೆ ಎಂದು ಜೆಡಿಎಸ್ ಮುಖಂಡ ಹೊರಟ್ಟಿ ಹೇಳಿದ್ದಾರೆ.
ಕುಮಾರಸ್ವಾಮಿಯವರು ಇತ್ತೀಚೆಗೆ ಕಾಂಗ್ರೆಸ್ ನಾಯಕರ ವಿರುದ್ಧ ಸತತ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೊರಟ್ಟಿಯವರ ಹೇಳಿಕೆಯೂ ಮಹತ್ವ ಪಡೆದಿದೆ