ಜಪಾನ್ ನಲ್ಲಿ ಭೂಕಂಪ : ಸುನಾಮಿಯ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಟೋಕಿಯೋ : ಕಳೆದ ಜೂನ್ ನಲ್ಲಿ ಜಪಾನ್ ದೇಶದಲ್ಲಿ ಭೂಕಂಪ ಸಂಭವಿಸಿದ್ದು 350ಕ್ಕೂ ಹೆಚ್ಚು ಗಾಯಗೊಂಡಿದ್ದರು.ಐದು ಮಂದಿ ಮೃತಪಟ್ಟಿದ್ದರು.ಇದೀಗ ಮತ್ತೆ ಭೂಕಂಪ ಮರಕಳಿಸಿದೆ.

ಜಪಾನಿನ ಈಶಾನ್ಯ ಕರಾವಳಿ ಪ್ರದೇಶದಲ್ಲಿ ಭೀಕರ ಭೂಕಂಪ ಸಂಭವಿಸಿದೆ.ರಿಕ್ಟರ್ ಮಾಪಕದಲ್ಲಿ 7.2 ರಷ್ಟು ತೀವ್ರತೆ ದಾಖಲಾಗಿದೆ.ಈ ನಿಟ್ಟಿನಿಂದ ಸುನಾಮಿಯ ಎಚ್ಚರಿಕೆಯನ್ನು ನೀಡಿದ್ದೇವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸ್ಥಳೀಯ ಸರಕಾರವು ಈ ಕುರಿತು ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದೆ.ಮಿಯಾಗಿ ಪ್ರದೇಶದ ಪೆಸಿಫಿಕ್ ಸಾಗರದಾಳದಲ್ಲಿ ಈ ಪ್ರಬಲ ಭೂಕಂಪ ಸಂಭವಿಸಿದ್ದು, ಸುತ್ತಮುತ್ತ ಪ್ರದೇಶದಲ್ಲಿ ಸುನಾಮಿ ಎದ್ದೇಳುವ ಸಾಧ್ಯತೆ ಇದ್ದಿರುವುದಾಗಿ ಎಚ್ಚರಿಕೆಯ ಸಂದೇಶವನ್ನು ನೀಡಲಾಗಿದೆ ಎಂದು ವರದಿ ತಿಳಿಸಿದೆ.
ಭೂಕಂಪದಿಂದ ಯಾವುದೇ ಸಾವು ನೋವಿನ ಕುರಿತು ವರದಿಯಾಗಲಿಲ್ಲ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು